Site icon Vistara News

Honorarium Hike | ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಮಾಸಿಕ ಗೌರವಧನ ಹೆಚ್ಚಳ; ದುಪ್ಪಟ್ಟು ಮಾಡಿ ಆದೇಶ

Honorarium Hike

ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಮಾಸಿಕ ಗೌರವಧನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಮಾಸಿಕ 6,000 ರೂ., ಉಪಾಧ್ಯಕ್ಷರಿಗೆ 4,000 ರೂ. ಹಾಗೂ ಸದಸ್ಯರಿಗೆ 2,000 ಸಾವಿರ ರೂಪಾಯಿ ಗೌರವಧನ (Honorarium Hike) ಹೆಚ್ಚಿಸಿ ಆದೇಶಿಸಲಾಗಿದೆ.

ಈ ಮೊದಲು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ 3000, ಉಪಾಧ್ಯಕ್ಷರಿಗೆ 2000 ರೂ. ಹಾಗೂ ಸದಸ್ಯರಿಗೆ 1000 ರೂಪಾಯಿ ಇತ್ತು. ಈಗ ಮಾಸಿಕ ಗೌರವಧನವನ್ನು ಪರಿಷ್ಕರಣೆ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ | Junior Veterinary Examiner 2022 | ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ಜ.22ಕ್ಕೆ ಲಿಖಿತ ಪರೀಕ್ಷೆ

Exit mobile version