Site icon Vistara News

Hoode Beach | ಅಲೆಗಳ ತೀವ್ರತೆಗೆ ಸಿಲುಕಿ ಸಮುದ್ರ ಪಾಲಾದ ವಿದ್ಯಾರ್ಥಿಗಳು; ಈಜು ತಂದ ಆಪತ್ತು

ಉಡುಪಿ: ಇಲ್ಲಿನ ಹೂಡೆ ಬೀಚ್‌ನಲ್ಲಿ (Hoode Beach) ಭಾನುವಾರ ಈಜಲು ಹೋಗಿದ್ದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲಾಗಿದ್ದ ಪ್ರಕರಣದಲ್ಲಿ ಸೋಮವಾರ ಮೂರನೇ ವಿದ್ಯಾರ್ಥಿಯ ಮೃತದೇಹವೂ ಪತ್ತೆಯಾಗಿದೆ. ಭಾನುವಾರ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕಾಣೆಯಾಗಿದ್ದವ ಹುಡುಕಾಟ ನಡೆದಿತ್ತು. ಈಗ ಆತನೂ ಶವವಾಗಿ ಪತ್ತೆಯಾಗಿದ್ದಾನೆ.

ಮಣಿಪಾಲ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ನಿಶಾಂತ್, ಷಣ್ಮುಖ್‌, ಶ್ರೀಕರ್‌ ಮೃತರು. ಮಲ್ಪೆ ಸಮೀಪದ ಹೂಡೆ ಬೀಚ್‌ನಲ್ಲಿ ಮೂವರು ವಿದ್ಯಾರ್ಥಿಗಳು ಭಾನುವಾರ ಈಜುವ ಸಲುವಾಗಿ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಭಾರಿ ಅಲೆಗಳು ಎದ್ದಿದ್ದು, ಇವರಿಗೆ ಈಜಲು ಆಗದೇ ಮುಳುಗಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ಷಣೆಗೆ ದಾವಿಸಿದ್ದಾರೆ. ಮುಳುಗಿದ್ದ ನಿಶಾಂತ್, ಷಣ್ಮುಖ್‌ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದರು. ಮುಳುಗು ತಜ್ಞರು ನಾಪತ್ತೆಯಾದ ಶ್ರೀಕರ್‌ ಹುಡುಕಾಟದಲ್ಲಿದ್ದರು. ಸೋಮವಾರ ಬೆಳಗ್ಗೆ ಸಮುದ್ರ ತೀರದಲ್ಲಿ ಶ್ರೀಕರ್‌ ಮೃತದೇಹವೂ ಪತ್ತೆಯಾಗಿದೆ. ಉಡುಪಿಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಹೂಡೆ ಬೀಚ್‌ ಬಳಿ ಸಮುದ್ರದಲ್ಲಿ ಮುಳುಗಿ ಇಬ್ಬರ ಸಾವು, ಒಬ್ಬ ನಾಪತ್ತೆ

Exit mobile version