ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಜಾತಿ, ಸಮುದಾಯಗಳ ಓಲೈಕೆಗಾಗಿ ನಿಗಮಗಳ ರಚನೆಗೆ ವೇಗವನ್ನು ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎರಡೇ ದಿನಗಳ ಅವಧಿಯಲ್ಲಿ ಐದನೇ ನಿಗಮದ ಸ್ಥಾಪನೆಯನ್ನು ಘೋಷಿಸಿದ್ದಾರೆ. ಘೋಷಣೆಯಾಗಿರುವ ಐದನೇ ನಿಗಮವೇ ಹೂಗಾರ ಅಭಿವೃದ್ಧಿ ನಿಗಮ (Hugara Nigama).
ಹೂವಾಡಿಗ, ಹುಗಾರ್, ಹೂಗಾರ್, ಮಾಲಗಾರ್, ಮಾಲಿ, ಫೂಲ್‌ಮಾಲಿ, ಫುಲ್‌ಮಾಲಿ, ಫುಲಾರಿ, ಪೂಲಾರಿ, ಜೀರ್ ಜಾತಿಗಳ ಅಭಿವೃದ್ಧಿಗಾಗಿ ಹೂಗಾರ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳು ಸೋಮವಾರ ಶ್ರೀ ನಾರಾಯಣ ಗುರು ನಿಗಮ, ಗಾಣಿಗ ಅಭಿವೃದ್ಧಿ ನಿಗಮ ಮತ್ತು ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಘೋಷಿಸಿದ್ದರು. ಮಂಗಳವಾರ ಮೇದರ ಅಭಿವೃದ್ಧಿ ನಿಗಮ (Medara Nigama) ಸ್ಥಾಪನೆಯನ್ನು ಘೋಷಿಸಲಾಗಿದೆ. ಈಗ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಪ್ರಕಟಿಸಲಾಗಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಬರುವ ಹೂವಾಡಿಗ, ಹುಗಾರ್, ಹೂಗಾರ್, ಮಾಲಗಾರ್, ಮಾಲಿ, ಫೂಲ್‌ಮಾಲಿ, ಫುಲ್‌ಮಾಲಿ, ಫುಲಾರಿ, ಪೂಲಾರಿ, ಜೀರ್ ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಸಮುದಾಯಗಳ ಅಭಿವೃದ್ಧಿಗಾಗಿ ಮಾಳಿ/ಮಾಲಗಾರ ನಿಗಮವನ್ನು ಸ್ಥಾಪಿಸಲು ಆದೇಶಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೂವಾಡಿಗ, ಹುಗಾರ್, ಹೂಗಾರ್, ಮಾಲಗಾರ್, ಮಾಲಿ, ಫೂಲ್‌ಮಾಲಿ, ಫುಲ್‌ಮಾಲಿ, ಫುಲಾರಿ, ಫೂಲಾರಿ, ಜೀರ್ ಅಭಿವೃದ್ಧಿಗಾಗಿ “ಕರ್ನಾಟಕ ಮಾಲಿ-ಮಾಲಗಾರ್ ಸಮುದಾಯಗಳ ಸರ್ವತೋಮುಖ ಹಾಗೂ ಹೂಗಾರ ಅಭಿವೃದ್ಧಿ ನಿಗಮ”ವನ್ನು ಸ್ಮಾಪಿಸಿ ಆದೇಶಿಸಿದ್ದಾಗಿ ಪ್ರಕಟಿಸಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರು ಕೂಡಾ ಇದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ : Medara Nigama : ಮೇದರ ಅಭಿವೃದ್ಧಿ ನಿಗಮ ಘೋಷಿಸಿದ ಸಿಎಂ; 8 ಸಮುದಾಯಗಳಿಗೆ ಅನುಕೂಲ