Site icon Vistara News

Hori Habba | ಹೋರಿ ಬೆದರಿಸುವ ಹಬ್ಬ; ಕೊಬ್ಬರಿ ಹೋರಿ ತಿವಿದು ಯುವಕ ಸಾವು

ಕೊಬ್ಬರಿ ಹೋರಿ ತಿವಿದು

ಹಾವೇರಿ: ಇಲ್ಲಿನ ಬ್ಯಾಡಗಿ ತಾಲೂಕಿನ ಚಿಕ್ಕಬಾಸುರು ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ (Hori Habba) ಯುವಕನಿಗೆ ಕೊಬ್ಬರಿ ಹೋರಿ ತಿವಿದು ಮೃತಪಟ್ಟಿರುವ ಘಟನೆ ನಡೆದಿದೆ. ಮಂಜುನಾಥ ಮೈಲಾರಪ್ಪ ಚಳ್ಳಕ್ಕನವರ (29) ಮೃತ ದುರ್ದೈವಿ.

ಕಾರ್ತಿಕೋತ್ಸವ ಪ್ರಯುಕ್ತ ಹೋರಿ ಹಬ್ಬವನ್ನು ನಡೆಸಲಾಗುತ್ತಿದ್ದು, ಹೋರಿ ಬೆದರಿಸುವ ಹಬ್ಬವನ್ನು ನೋಡಲು ಹೋದ ಯುವಕನಿಗೆ ಓಡಿ ಬಂದು ಹೋರಿ ತಿವಿದಿದೆ. ತಿವಿದ ರಭಸಕ್ಕೆ ಮಂಜುನಾಥ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಇತ್ತ ಹೋರಿ ಹಬ್ಬದಲ್ಲಿ 12 ಜನರಿಗೆ ಗಾಯವಾಗಿದ್ದು, ಶಿವಪ್ಪ ಲಮಾಣಿ, ಕುಮಾರ ಮಲ್ಲಪ್ಪ ಕಮ್ಮಾರ, ಸೊಮಣ್ಣ ಬಸಪ್ಪ ಬಿಳಗ್ಲಿ, ಪ್ರಶಾಂತ ರಮೇಶ ಮುಡಿ, ವಿರೂಪಾಕ್ಷ ಮುತ್ತಳ್ಳಿ, ಹೊನ್ನಪ್ಪ ಬಸಪ್ಪ ಕುರಬರ ಎಂಬುವವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತ ಮಂಜುನಾಥ್‌ ಸಂಗೂರು ಗ್ರಾಮದವರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ | Road Accident | ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಗೆ ಲಾರಿ ಡಿಕ್ಕಿ; ಗಂಭೀರ ಗಾಯ

Exit mobile version