ಹೊಸನಗರ: ಭತ್ತದ ಒಕ್ಕಲು ಮಾಡುವಾಗ ರೈತರೊಬ್ಬರ ಕೈ ಮಿಷನ್‌ಗೆ (Machinery Accident) ಸಿಲುಕಿ ಸಂಪೂರ್ಣ ತುಂಡಾದ ಪ್ರಕರಣ ತಾಲೂಕಿನ ದೇವಗಂಗೆಯಲ್ಲಿ ಮಂಗಳವಾರ (ಡಿ.೬) ನಡೆದಿದೆ.
ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯ ರೈತ ವಿಶ್ವನಾಥ ಕೈ ಕಳೆದುಕೊಂಡವರು. ಗಂಭೀರವಾಗಿ ಗಾಯಗೊಂಡ ವಿಶ್ವನಾಥ್ ಹಾಗೂ ತುಂಡಾಗಿದ್ದ ಕೈಯನ್ನು ಹಿಡಿದುಕೊಂಡು ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆದರೆ, ಕೈಯನ್ನು ಮರುಜೋಡನೆ ಮಾಡಲು ಅಸಾಧ್ಯ ಎಂದು ವೈದ್ಯರು ತಿಳಿಸಿದರು.
ದೇವಗಂಗೆ ಮಹೇಶಗೌಡ ಅವರ ಜಮೀನಿನಲ್ಲಿ ಒಕ್ಕಲು ಕೆಲಸ ನಡೆಯುತ್ತಿದ್ದು, ವಿಶ್ವನಾಥ ಸೇರಿದಂತೆ 14 ರೈತರು ಕೆಲಸ ಮಾಡುತ್ತಿದ್ದರು. ವಿಶ್ವನಾಥ ಬಡ ರೈತರಾಗಿದ್ದು, ಬಲಗೈಯನ್ನೇ ಕಳೆದುಕೊಂಡಿದ್ದಾರೆ. ಇದು ಕುಟುಂಬದವರ ಆತಂಕಕ್ಕೆ ಕಾರಣವಾಗಿದ್ದು, ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Theft case | ಏಳು ಮಂದಿ ಖತರ್ನಾಕ್ ಕಳ್ಳರು, ಸುಲಿಗೆಕೋರರ ಬಂಧನ: 2೦ ಲಕ್ಷ ಮೌಲ್ಯದ ಸೊತ್ತು ವಶ