Site icon Vistara News

Hosanagara News | ಮರಗಳ್ಳರಿಂದ ಲಾರಿ ಸಮೇತ ಅಕೇಶಿಯ, ನೀಲಗಿರಿ ಪಲ್ಪ್ ವುಡ್ ವಶ

Tree Thieves Acacia, Nilgiri pulpwood seized CID Police


ಹೊಸನಗರ: ತಾಲೂಕಿನ ಹುಳಿ ಗದ್ದೆ ಗ್ರಾಮದ ಸರ್ಕಾರಿ ಗೋಮಾಳಕ್ಕೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ (Hosanagara News) ಮಾಡಿದ್ದು, ಲಾರಿ ಸಮೇತ ಅಕೇಶಿಯ, ನೀಲಗಿರಿ ಪಲ್ಪ್ ವುಡ್ ವಶಕ್ಕೆ ಪಡೆದುಕೊಂಡಿದೆ.

ಮರಗಳ್ಳರು ಯಾವುದೇ ಪರವಾನಗಿ ಇಲ್ಲದೆ ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಕಡಿದು ಲಾರಿಗೆ ಲೋಡ್ ಮಾಡುತ್ತಿದ್ದರು. ಮಾಹಿತಿ ತಿಳಿದ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳವು ದಾಳಿ ಮಾಡಿ ವುಡ್ ಕಟಿಂಗ್ ಮಷಿನ್ ಮತ್ತು ಲಾರಿ ಸಮೇತ ಮಾಲನ್ನು ವಶಕ್ಕೆ ಪಡೆದುಕೊಂಡಿತು.

ಮುಂದಿನ ಕಾನೂನು ಕ್ರಮಕ್ಕೆ ವಲಯ ಅರಣ್ಯಾಧಿಕಾರಿ ಹೊಸನಗರದ ಅರಣ್ಯ ಅಧಿಕಾರಿಗಳಿಗೆ ನೀಡಲಾಗಿದೆ. ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಿಎಸ್ಐ ವಿನಾಯಕ ಸಿಬ್ಬಂದಿ ಗಿರೀಶ ಕೃಷ್ಣ ಗಣೇಶ ಮಹೇಶ್ ದಿನೇಶ್ ಪಾಲ್ಗೊಂಡಿದ್ದರು.

ಇದನ್ನೂ ಓದಿ | Road accident | ಕಾರು-ಕಂಟೇನರ್‌ ಅಪಘಾತ: ಸಿಂದಗಿ ಪೊಲೀಸ್‌ ಇನ್ಸ್‌ಪೆಕ್ಟರ್‌, ಪತ್ನಿ ಸ್ಥಳದಲ್ಲೇ ದುರ್ಮರಣ

Exit mobile version