ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (hostel hudugaru) ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಈ ಸಿನಿಮಾದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಬಿಡುಗಡೆಗೆ ಅನುವು ಮಾಡಿಕೊಟ್ಟಿದೆ. ಈ ವಿಷಯದಲ್ಲಿ ನಟಿ ರಮ್ಯಾ (ramya) ಅವರಿಗೆ ಹಿನ್ನಡೆಯಾಗಿದ್ದರೂ ವಿಷಯ ಇಷ್ಟಕ್ಕೆ ಮುಗಿದಿಲ್ಲ. ಸದ್ಯಕ್ಕೆ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ರಮ್ಯಾ ವರ್ಸಲ್ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡದ ಫೈಟ್ ಮುಂದುವರಿಯಲಿದೆ. ಯಾಕೆಂದರೆ, ಇದೇ ತಿಂಗಳು 27ವರೆಗೆ 50 ಲಕ್ಷ ರೂಪಾಯಿ ಠೇವಣಿ ಇಡುವಂತೆ ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯವು ತಿಳಿಸಿದೆ. ಒಂದೊಮ್ಮೆ ಠೇವಣಿ ಇಡಲು ಸಾಧ್ಯವಾಗದೇ ಹೋದರೆ, ಸಿನಿಮಾ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಸದ್ಯದ ಮಟ್ಟಿಗೆ ಕೇಸ್ ತೆರವು ಗೊಳಿಸಲಾಗಿದೆಯೇ ಹೊರತು, ಪ್ರಕರಣವನ್ನು ವಜಾ ಮಾಡಿಲ್ಲ.(Kannada New Movie)
ನಟಿ ರಮ್ಯಾ ಕೋರ್ಟ್‌ಗೆ ಹೋಗಿದ್ದೇಕೆ?
ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಈಗ ರಮ್ಯಾ ಅವರು ತಕರಾರು ತೆಗೆದಿದ್ದರು. ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯ ಬಳಸಬಾರದು ಎಂದು ತಡೆಯಾಜ್ಞೆ ನೀಡಿದ್ದರು. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್ ಮಾಡಿದ್ದರು. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟಿಸ್ನಲ್ಲಿ ಒತ್ತಾಯಿಸಿದ್ದರು. ಈ ಸಂಬಂಧ ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಆದರೀಗ ಹಾಸ್ಟೆಲ್ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು. ಜುಲೈ 21ರಂದು ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿದೆ. ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದೆ ಕೋರ್ಟ್.
ಸಂಭಾವನೆ ಬೇಡ ಎಂದಿದ್ದ ರಮ್ಯಾ?
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸಂಭಾವನೆ ಬೇಡ ಎಂದಿದ್ದ ರಮ್ಯಾ. ಕೊನೆ ಕ್ಷಣದಲ್ಲಿ ಮನ ಬದಲಿಸಿದ್ಯಾಕೆ ಎಂಬುದು ಗೊತ್ತಿಲ್ಲ. ರಮ್ಯಾ ಬೇಡಿಕೆಗೆ ಒಪ್ಪಿ ಶೇಕಡ 5% ಸಂಭಾವನೆ ಕೊಡಲು ನಿರ್ಮಾಪಕರು ಮುಂದಾಗಿದ್ದರು. ಸ್ಯಾಟಲೈಟ್, ಹಾಗೂ ಡಿಜಿಟಲ್ ಹಕ್ಕುಗಳಿಂದ ಬರುವ ಹಣದಲ್ಲಿ ಶೇಕಡಾ 5ರಷ್ಟು ಸಂಭಾವನೆ ನೀಡೋದಾಗಿ ಹೇಳಿದ್ದರು. ಒಪ್ಪಂದಕ್ಕೆ ಕೊನೆಕ್ಷಣದಲ್ಲಿ ಉಲ್ಟಾ ಹೊಡೆದು ಶೇಕಡಾ 20ರಷ್ಟು ಸಂಭಾವನೆ ಬೇಕೆಂದು ರಮ್ಯಾ ಪಟ್ಟು ಹಿಡಿದಿದ್ದರು . ರಮ್ಯಾ ಹಾಸ್ಟೆಲ್ ಹುಡುಗರು ಶೆಟ್ಟಿ&ಬಳಗ ಹಾಗೂ kRG ಸ್ಟುಡಿಯೋಸ್ ಇದೆಲ್ಲದರ ನಡುವೆ ನಂಟು ಇದೆಯಾ..? ಈ ಎಲ್ಲ ಪ್ರಶ್ನೆಗಳಿಗೆ ರಮ್ಯಾ ಅವರ ಉತ್ತರಿಸಬೇಕಿದೆ.
ಹಾಸ್ಟೆಲ್ ಹುಡುಗರಿಗೆ ಹಲವು ಕಲಾವಿದರಿಂದ ಸಾಥ್
ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.
ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.