Site icon Vistara News

Hostel Problem : ಸಮಸ್ಯೆಗಳ ಸುಳಿಯಲ್ಲಿ ಹಾಸ್ಟೆಲ್‌ ಹುಡುಗರು; ತುರಿಕೆ, ಡೆಂಗೆ ಸಮಸ್ಯೆ, ಚಿಂತಾಮಣಿಯಲ್ಲಿ ಏನಿದು ಅನಾಹುತ?

hostel students

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮಹಳ್ಳಿ ಬಾಲಕರ ಹಾಸ್ಟೆಲ್‌ನ (Chintamani doddabommahalli Hostel) ಪರಿಸ್ಥಿತಿ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಈ ಹಾಸ್ಟೆಲ್‌ನಲ್ಲಿ (Hostel problem) ವಾಸವಾಗಿರುವ ವಿದ್ಯಾರ್ಥಿಗಳ ಪೈಕಿ 70ಕ್ಕೂ ಅಧಿಕ ಮಂದಿ ಚರ್ಮದ ಅಲರ್ಜಿಯಿಂದ (Skin allergy) ಬಳಲುತ್ತಿದ್ದಾರೆ. ಹಾಸ್ಟೆಲ್‌ನ ಬಹುತೇಕ ವಿದ್ಯಾರ್ಥಿಗಳು ಡೆಂಗೆ ಜ್ವರ ಅಟ್ಯಾಕ್‌ (Dengue fever) ಮಾಡಿದೆ. ಆದರೆ ಇದ್ಯಾವುದರ ಬಗ್ಗೆಯೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು (Social welfare dept officials) ಲಕ್ಷ್ಯ ವಹಿಸುತ್ತಿರುವಂತೆ ಕಂಡುಬರುತ್ತಿಲ್ಲ.

70 ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಚರ್ಮದ ಅಲರ್ಜಿ ಕಾಣಿಸಿಕೊಂಡಿದೆ. ನಿರಂತರ ತುರಿಕೆ ಗಾಯಗಳಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸ್ಟೆಲ್ ಬಹುತೇಕ ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರ ಅಟ್ಯಾಕ್ ಆಗಿದೆ. ತೀವ್ರ ಮೈ ಕೈ ನೋವು ಜ್ವರದಿಂದ ವಿದ್ಯಾರ್ಥಿಗಳು ಬಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಡೆಂಗೆ ಜ್ವರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.

itching in student

ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯೇ ಚರ್ಮದ ತುರಿಕೆ, ಡೆಂಗೆ ಜ್ವರಕ್ಕೆ ಕಾರಣ ಎನ್ನುವುದು ವಿದ್ಯಾರ್ಥಿಗಳ ಆರೋಪ. ಹಾಸ್ಟೆಲ್‌ನಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ಚರ್ಮ ರೋಗ ಕಾಣಿಸಿಕೊಂಡಿದೆ ಎಂಬ ಆರೋಪವಿದೆ. ಇದರ ಜತೆಗೆ ಸ್ವಚ್ಛತೆಯೂ ಇಲ್ಲ. ಹೀಗಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದಾಗಿ ಚರ್ಮದ ತುರಿಕೆ ಮತ್ತು ಡೆಂಗೆ ಜ್ವರಕ್ಕೆ ಕಾರಣವಾಗಿದೆ.

ಚರ್ಮದ ಅಲರ್ಜಿ ಬಗ್ಗೆ ವಾರ್ಡನ್ ಬಳಿ ಹೇಳಿಕೊಂಡರೂ ಯಾವುದೇ ರೀತಿಯ ಲಕ್ಷ್ಯ ವಹಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸಮಸ್ಯೆ ಹೇಳಿದರೆ ಹಾಸ್ಟೆಲ್ ನಿಂದ ಗೇಟ್ ಪಾಸ್ ಕೊಡೋದಾಗಿ ವಾರ್ಡನ್ ಬೆದರಿಕೆ ಹಾಕುತ್ತಾರೆ ಎನ್ನುವುದು ಆರೋಪ.

ಹಾಸ್ಟೆಲ್‌ ಹುಡುಗನಿಗೆ ತುರಿಕೆಯಿಂದ ಆಗಿರುವ ಗಾಯಗಳು

ವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಸೋಪು, ಪೇಸ್ಟ್, ಬ್ರಷ್‌ ಸೇರಿದಂತೆ ಹಲವು ವಸ್ತುಗಳನ್ನು ಒಳಗೊಂಡ ಕಿಟ್ ನೀಡಬೇಕು. ಆದರೆ, ಇದನ್ನು ಇನ್ನೂ ಕೊಟ್ಟಿಲ್ಲ. ಕುಡಿಯುವ ನೀರು, ಹಾಸಿಗೆ, ಬೆಡ್ ಶೀಟ್ ಕೇಳಿದರೆ ವಿದ್ಯಾರ್ಥಿಗಳ ಮೇಲೆ ವಾರ್ಡನ್ ದೌರ್ಜನ್ಯ ನಡೆಸುತ್ತಾರೆ ಎಂದೆಲ್ಲ ಆರೋಪಿಸಲಾಗಿದೆ.

ಇದೆಲ್ಲದರ ವಿರುದ್ಧ ಈಗ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಹಾಸ್ಟೆಲ್ ವಾರ್ಡನ್ ಮುನಿರತ್ನಮ್ಮ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಗೊತ್ತಿದ್ದೂ, ಕಂಡೂ ಕಾಣದಂತೆ ನಟನೆ ಮಾಡುತ್ತಿರುವ ಡಿಎಸ್ ಡಬ್ಲ್ಯೂ ತೇಜಾನಂದ ರೆಡ್ಡಿ ಅವರ ವಿರುದ್ಧವೂ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರ್ಡನ್ ಮುನಿರತ್ನಮ್ಮ ವಿರುದ್ದ ಕ್ರಮ ಜರುಗಿಸುವಂತೆ ವಿದ್ಯಾರ್ಥಿಗಳ ಒತ್ತಾಯ‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Kota Students: ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ಹಾಸ್ಟೆಲ್‌ಗಳಲ್ಲಿ ಇನ್ನು ಬಲೆಯ ರಕ್ಷಣೆ!

ಹಾಸ್ಟೆಲ್‌ನಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ತುರಿಕೆ ಕಂಡುಬಂದಿದೆ. ಹೀಗಾಗಿ ಸಮಸ್ಯೆ ಹಾಸ್ಟೆಲ್‌ನಲ್ಲೇ ಇದೆ ಎಂದು ಪೋಷಕರು ಹೇಳಿದರೆ ಅವರ ಮಾತನ್ನೂ ವಾರ್ಡನ್‌ ಒಪ್ಪುತ್ತಿಲ್ಲ ಎನ್ನಲಾಗಿದೆ. ನಮ್ಮಲ್ಲಿ ಸಮಸ್ಯೆಯೇ ಇಲ್ಲ ಎಂದು ವಾರ್ಡನ್‌ ಹೇಳಿದ್ದಾರೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.

Exit mobile version