Site icon Vistara News

House burnt | ದಂಪತಿ, ಪುಟ್ಟ ಮಗು ಒಳಗಿರುವಾಗಲೇ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

house burnt

ನೆಲಮಂಗಲ: ದಂಪತಿ ಮತ್ತು ಪುಟ್ಟ ಮಗು ಮನೆಯೊಳಗೆ ಇರುತ್ತಲೇ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆಯೊಂದು (House burnt) ಡಾಬಸ್‌ಪೇಟೆಯ ಹೊನ್ನೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆಶಾ-ಪುರುಷೋತ್ತಮ ದಂಪತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಡಾಬಸ್‌ಪೇಟೆಯ ಈ ಮನೆಯಲ್ಲಿ ಪುರುಷೋತ್ತಮ ಮತ್ತು ಆಶಾ ದಂಪತಿ ವಾಸವಾಗಿದ್ದರು. ಇವರಿಗೆ ಮೂರು ತಿಂಗಳ ಪುಟ್ಟ ಮಗುವೊಂದಿದೆ.

ಶನಿವಾರ ರಾತ್ರಿ ೧೧ ಗಂಟೆಯ ಸುಮಾರಿಗೆ ಈ ಮನೆಗೆ ಬೆಂಕಿ ಹಚ್ಚಲಾಗಿದೆ. ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ಬಾಗಿಲಿನ ಮೂಲಕವೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಆಗಷ್ಟೇ ಮಲಗಿದ್ದ ದಂಪತಿ ಬೆಂಕಿಯಿಂದ ಎಚ್ಚೆತ್ತು ಬೊಬ್ಬೆ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ರಕ್ಷಣೆ ಮಾಡಿದರು. ಮೂವರೂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯ ಹಲವು ವಸ್ತುಗಳು ಸುಟ್ಟು ಹೋಗಿವೆ.

ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಯ ಹಿನ್ನೆಲೆ, ಅವರ ಕುಟುಂಬ ಮತ್ತು ಇತರ ವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜತೆಗೆ ಪರಿಸರದ ಸಿಸಿ ಟಿವಿಗಳ ಪರಿಶೀಲನೆಯೂ ನಡೆಯುತ್ತಿದೆ.

ಇದನ್ನೂ ಓದಿ | ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಒಂದು ಮಗು ಸಾವು

Exit mobile version