Site icon Vistara News

Hoysala Police: ಜಸ್ಟ್‌ 6 ತಿಂಗಳಲ್ಲಿ 500ಕ್ಕೂ ಹೆಚ್ಚು ದೂರು; ಕಾಲು ಗಂಟೆಯಲ್ಲೇ ಕಾಲ್ಕೀಳಬೇಕು ಹೊಯ್ಸಳ ಪೊಲೀಸರು!

ಹೊಯ್ಸಳ ಪೊಲೀಸರಿಂದ ಸುಲಿಗೆ

ಬೆಂಗಳೂರು: ಪೊಲೀಸ್‌ ಇಲಾಖೆ ಸುಧಾರಣೆಯತ್ತ ಸಾಗಲು ಅನೇಕ ಯೋಜನೆಗಳನ್ನು ತರಲಾಗುತ್ತಿದೆ. ಆದರೆ ಎಷ್ಟೇ ರೂಲ್ಸ್‌ಗಳನ್ನು ತಂದರೂ ಅಡ್ಡದಾರಿ ಹಿಡಿದು ಕೆಲ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ. ಅದರಲ್ಲೂ ಬೀಟ್‌ನಲ್ಲಿರುವ ಹೊಯ್ಸಳ ಸಿಬ್ಬಂದಿ (Hoysala Police) ಮೇಲೆ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸ್‌ ಇಲಾಖೆ ಬಾಡಿ ವೋರ್ನ್‌ ಕ್ಯಾಮೆರಾದ (Body worn camera) ಮೊರೆ ಹೋಗಿದೆ. ಜತೆಗೆ ಒಂದೇ ಕಡೆ 15 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ಲುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಈ ಹಿಂದೆ ಟೋಯಿಂಗ್‌ ವೇಳೆ ಟ್ರಾಫಿಕ್‌ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆರಾವನ್ನು ನೀಡಿಲಾಗಿತ್ತು. ಒಂದು ಹಂತಕ್ಕೆ ಬಾಡಿ ವೋರ್ನ್‌ ಕ್ಯಾಮೆರಾ ಯಶಸ್ವಿ ಕೂಡ ಆಗಿದೆ. ಹೀಗಾಗಿ ಹೊಯ್ಸಳ ಬೀಟ್‌ ಪೊಲೀಸರ ಮೇಲೂ ನಿಗಾವಹಿಸಲು ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ನೀಡಲಾಗಿದೆ. ಮೊದಲು ಕೇವಲ 20 ಕ್ಯಾಮೆರಾ ಮುಖಾಂತರ ಕಾರ್ಯಾರಂಭ ಮಾಡಲಾಗಿತ್ತು. ಈಗ 450ಕ್ಕೂ ಹೆಚ್ಚು ಹೊಯ್ಸಳ ಬೀಟ್‌ ಸಿಬ್ಬಂದಿಗೆ ನೀಡಲು ಯೋಜನೆ ರೂಪಿಸಲಾಗಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ರೀತಿಯಲ್ಲಿ ಪೊಲೀಸರ ಮೇಲೆ 500ಕ್ಕೂ ಹೆಚ್ಚು ದೂರು ಬಂದಿವೆ.

ಪೊಲೀಸರು ಅಂಗಡಿ ಬಳಿ ಹಣ ತೆಗೆದುಕೊಳ್ಳುತ್ತಾರೆ, ಸುಖಾಸುಮ್ಮನೆ ಕೇಸುಗಳನ್ನು ಹಾಕುತ್ತಾರೆ, ಠಾಣೆಗೆ ಕರೆ ತಂದು ಕೂರಿಸುತ್ತಾರೆ ಎಂಬ ಆರೋಪಗಳು ಸುರಿಮಳೆಯೇ ಬರುತ್ತಿತ್ತು. ಆದರೆ ಇದಕ್ಕೆ ಯಾವುದೇ ಪೂರಕ ಸಾಕ್ಷಿಗಳು ಹಿರಿಯ ಅಧಿಕಾರಿಗಳಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಕರ್ತವ್ಯದಲ್ಲಿದ್ದಾಗ ಕಡ್ಡಾಯವಾಗಿ ಬಾಡಿ ವೋರ್ನ್‌ ಕ್ಯಾಮೆರಾ ಅಳವಡಿಸಲು ನಿರ್ದೇಶನ ನೀಡಲಾಗಿದೆ.

ಇದರ ಜತೆಗೆ ಪೊಲೀಸ್‌ ಬೀಟ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಇವೆ. ಹೀಗಾಗಿ ಒಂದು ಸ್ಥಳದಲ್ಲಿ 15 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ಲುವಂತಿಲ್ಲ. ಏರಿಯಾದಲ್ಲಿ ಏನೇ ನಡೆದರೂ ನಡೆಯದೆ ಇದ್ದರೂ ಕೂಡ ಬೀಟ್‌ ಮಾಡುತ್ತಲೇ ಇರಬೇಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Weather Report: ರಾಜ್ಯದಲ್ಲಿ ಜೂ.25ರವರೆಗೆ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಜತೆಗ ಟೈಂ ಪಾಸ್‌ ಮಾಡುವ ಕೆಲ ಪೊಲೀಸರಿಗೂ ಈಗಾಗಲೆ ವಾರ್ನಿಂಗ್‌ ನೀಡಲಾಗಿದೆ. ಎಲ್ಲಾ ವಿಭಾಗದ ಡಿಸಿಪಿಗಳು ತಮ್ಮ ಕೆಳ ಹಂತದ ಸಿಬ್ಬಂದಿ ಚಲನವಲನ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version