Site icon Vistara News

Bengaluru Airport | ಟರ್ಮಿನಲ್ 2 ಉದ್ಘಾಟನೆಗೆ ಸಜ್ಜು, ಕೆಐಎನಲ್ಲಿ ವರ್ಷಕ್ಕೆ 6 ಕೋಟಿ ಪ್ರಯಾಣಿಕರ ನಿರ್ವಹಣೆ!

Bengaluru Airport

ಬೆಂಗಳೂರು: ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Airport) 2ನೇ ಟರ್ಮಿನಲ್(T2) ಹಲವು ವಿಶೇಷಗಳನ್ನು ಹೊಂದಿದೆ. ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ 2ನೇ ಟರ್ಮಿನಲ್‌ನಿಂದಾಗಿ ವಿಮಾನ ನಿಲ್ದಾಣವು ವರ್ಷಕ್ಕೆ 6 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿದೆ.

T2 ಚಾಲನೆಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಿರ್ವಹಣೆ ಮತ್ತು ಚೆಕ್ ಇನ್ ಮತ್ತು ಇಮ್ಮಿಗ್ರೇಷನ್ ಎರಡು ಪಟ್ಟು ಹೆಚ್ಚಾಗಲಿದೆ. ಇದರಿಂದ ಒಟ್ಟಾರೆ ವಿಮಾನ ನಿಲ್ದಾಣ ಸಾಮರ್ಥ್ಯವೂ ಹೆಚ್ಚಲಿದೆ. ಸದ್ಯ ಪ್ರಯಾಣಿಕರ ನಿರ್ವಹಣೆ ವರ್ಷಕ್ಕೆ 2.5 ಕೋಟಿ ಇದ್ದು, T2 ಉದ್ಘಾಟನೆಯಾದ ಬಳಿಕ ಅದು 6 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಹ್ಯಾಂಗಿಂಗ್ ಗಾರ್ಡನ್, ಔಟ್ ಡೋರ್ ಗಾರ್ಡನ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಏರ್‌ಪೋರ್ಟ್‌ನ ಸೌಂದರ್ಯವನ್ನು ಹೆಚ್ಚಿಸಿವೆ. ವಾಸ್ತವದಲ್ಲಿ T2 ಅನ್ನು ಟರ್ಮಿನಲ್ ಇನ್ ಗಾರ್ಡನ್ (Terminal in Garden) ಎಂದೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಟರ್ಮಿನಲ್ ಗ್ರೀನರಿಯಾಗಿದೆ ಎಂದು ಹೇಳಬಹುದು.

ಅರೈವಲ್ಸ್‌(ಆಗಮನ)ಗೆ ಗ್ರೌಂಡ್ ಫ್ಲೋರ್ ಮತ್ತು ಮೊದಲನೇ ಅಂತಸ್ತು ಡಿಪಾರ್ಚರ್(ನಿರ್ಗಮನ)ಗೆ ಮೀಸಲಾಗಿದೆ. ನಮ್ಮ ಮೆಟ್ರೋ ಸೇರಿದಂತೆ ಮಲ್ಟಿ ಮಾಡೆಲ್ ಹಬ್, ಸೋಲಾರ್ ಪ್ಯಾನೆಲ್ ಛಾವಣಿ, ಕೃತಕ ಜಲಪಾತಗಳು, ಎಲಿವೆಟೆಡ್ ವಾಕ್‌ವೇಯ್ಸ್, ಗ್ರೀನ್ ಸೀಟಿಂಗ್ ಏರಿಯಾಗಳು ಆಕರ್ಷಕವಾಗಿವೆ.

ಇದನ್ನೂ ಓದಿ | ವಿಸ್ತಾರ Explainer | ಪ್ರಧಾನಿ ಮೋದಿ ಉದ್ಘಾಟಿಸಲಿರುವ ಬೆಂಗಳೂರು ಏರ್‌ಪೋರ್ಟ್‌ನ 2ನೇ ಟರ್ಮಿನಲ್ ಹೇಗಿದೆ?

Exit mobile version