ಹುಬ್ಬಳ್ಳಿ: ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಾಶನವು ಕೀರ್ತಿಶೇಷ ಮ. ಅನಂತಮೂರ್ತಿಯವರ 24ನೇ ಪುಣ್ಯತಿಥಿಯ ಅಂಗವಾಗಿ ಪುಸ್ತಕ ಬಿಡುಗಡೆ (Book release) ಕಾರ್ಯಕ್ರಮವನ್ನು ಆಯೋಜಿಸಿದೆ. ಹುಬ್ಬಳ್ಳಿಯ ಜೆ. ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಭಾಂಗಣದಲ್ಲಿ ಸೆಪ್ಟೆಂಬರ್ 18ರಂದು ಸಂಜೆ 5 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮವು ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಜರುಗಲಿದೆ.
ಈವರೆಗೆ 700ಕ್ಕೂ ಹೆಚ್ಚಿನ ಪುಸ್ತಕಗಳನ್ನು ಹೊರತಂದಿರುವ ಸಾಹಿತ್ಯ ಪ್ರಕಾಶನವು ಎಂಟು ಪುಸ್ತಕಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣಗೊಳಿಸಲಿದೆ. ಡಾ. ಈಶ್ವರ ದೈತೋಟ, ಸುದರ್ಶನ ಮೊಗಸಾಲೆ, ಪ್ರೇಮಶೇಖರ, ಮಧುಕರ ಎಕ್ಕುಂಡಿ, ಡಾ. ಪಿ.ಎಸ್. ಶಂಕರ್ ಮತ್ತು ಡಾ. ರಾಜನ್ ದೇಶಪಾಂಡೆ ಅವರ ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ಈ ಪುಸ್ತಕಗಳು ರಿಯಾಯತಿ ದರದಲ್ಲಿ ಲಭ್ಯ ಇರಲಿವೆ. ಈ ಸಂದರ್ಭದಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಗೆ ಗೌರವಾರ್ಪಣೆ ಸಹ ನಡೆಯಲಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಅತಿಥಿಗಳಾಗಿ ಡಾ. ಈಶ್ವರ ದೈತೋಟ, ಡಾ. ರಾಜನ್ ದೇಶಪಾಂಡೆ, ಸುದರ್ಶನ ಮೊಗಸಾಲೆ ಮತ್ತು ಮಧುಕರ ಎಕ್ಕುಂಡಿ ಭಾಗವಹಿಸಲಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ವಿನಯ ಜವಳಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಥಳ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣ, ಜೆ ಸಿ ನಗರ, ಹುಬ್ಬಳ್ಳಿ
ಸಮಯ: ಸಂಜೆ ೫.೩೦
ಇದನ್ನೂ ಓದಿ | Sunday Read | ಹೋಗಲೇಬೇಕಾದ ಬುಕ್ ಕೆಫೆಗಳಿವು: ಇಲ್ಲಿ ಕಾಫಿ ಹೀರಿ, ಪುಸ್ತಕ ಓದಿ, ಕೊಳ್ಳಿ!