Site icon Vistara News

ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ ಬಸ್‌ ಹತ್ತಿದಾಗ ನಿರ್ವಾಹಕರಿಗೆ ಹೃದಯಾಘಾತ, ಸಾವು

bus conductor

ಹುಬ್ಬಳ್ಳಿ: ಬಸ್ ಟಿಕೆಟ್ ಚೆಕ್ಕಿಂಗ್ ಇನ್‌ಸ್ಪೆಕ್ಟರ್ ಬಸ್ ಹತ್ತುತ್ತಿದ್ದಂತೆ ನಿರ್ವಾಹಕರಿಗೆ ತೀವ್ರ ಹೃದಯಾಘಾತವಾಗಿದ್ದು, ನಂತರ ಮೃತಪಟ್ಟ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.

ಮಹೇಶ್ ಹೂಗಾರ (40) ಮೃತ ಬಸ್ ಕಂಡಕ್ಟರ್. ಸಿಬಿಟಿಯಿಂದ ಗಾಮನಗಟ್ಟಿಗೆ ಹೊರಟಿದ್ದ ಬಸ್ಸಿನ ನಿರ್ವಾಹಕರಾಗಿದ್ದರು. ಬಿವಿಬಿ ಬಸ್‌ಸ್ಟಾಪ್‌ನಲ್ಲಿ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಮಂಗಲಾ ಹೊಸಮನಿ ತಪಾಸಣೆಗಾಗಿ ಬಸ್ ಹತ್ತಿದ್ದರು. ಇದೇ ಸಮಯದಲ್ಲಿ ಕಂಡಕ್ಟರ್ ಮಹೇಶ ಹೂಗಾರ ಬಸ್‌ನಲ್ಲಿ ಎದೆ ನೋವಿನಿಂದ ಕುಸಿದುಬಿದ್ದಿದ್ದು, ತಕ್ಷಣ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Exit mobile version