Site icon Vistara News

ಸ್ಮಶಾನ ಭೂಮಿ ಅತಿಕ್ರಮಣದ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ಗ್ರಾಮಸ್ಥರು ಪ್ರತಿಭಟನೆ

ಹುಬ್ಬಳ್ಳಿ: ಸ್ಮಶಾನ ಭೂಮಿ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸೂಳಿಕಟ್ಟಿ ಗ್ರಾಮ ಪಂಚಾಯತಿ ಕಚೇರಿ ಎದುರು ಧರಣಿ ನಡೆಸಿದರು.

2005ರಲ್ಲಿ ಜಿಲ್ಲಾಧಿಕಾರಿಗಳು 3 ಎಕರೆ 14 ಗುಂಟೆ ಜಮೀನನ್ನು ಸ್ಮಶಾನಕ್ಕೆ ನೀಡಿ ಆದೇಶ ಮಾಡಿದ್ದರು. ಗ್ರಾಮ ಪಂಚಾಯತಿ ಪಿಡಿಒ ಆರ್.ವಿ. ಪೂಜಾರ ಎಂಬುವವರು ಅತಿಕ್ರಮಣದಾರರಿಂದ ತೆರವು ಮಾಡಿ ಜಮೀನನ್ನು ಗ್ರಾಮ ಪಂಚಾಯತಿ ಸುಪರ್ದಿಗೆ ಪಡೆದಿದ್ದರು.

ಇದನ್ನೂ ಓದಿ| ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಕಡೆ ಭೂಮಿ ಕಂಪನ

ಆದರೂ ಈಗ ಸಂಗಮೇಶ್ವರ ಗ್ರಾಮದ ವ್ಯಕ್ತಿಯೊಬ್ಬರು ಮತ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಅತಿಕ್ರಮಣವನ್ನು ಕೂಡಲೇ ತೆರವುಗೊಳ್ಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಕಲಘಟಗಿ ತಹಶೀಲ್ದಾರ್ ಯಲ್ಲಪ್ಪ ಗೋಣೆನವರ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.

ಸರ್ವೇ ಇಲಾಖೆಯಿಂದ ಕೂಡಲೇ ಹದ್ದು ಬಸ್ತು ಮಾಡಿ ಒತ್ತುವರಿ ಜಾಗ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ತಹಶೀಲ್ದಾರ್ ಭರವಸೆಗೆ ಸ್ಪಂಧಿಸಿದ ಗ್ರಾಮಸ್ಥರು ಜೂನ್ 21 ರೊಳಗೆ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ| ಬಸವೇಶ್ವರ ಜನ್ಮಭೂಮಿಯಿಂದ ಕರ್ಮಭೂಮಿಗೆ ಪ್ರವೇಶಿಸಿದ ಪಾದಯಾತ್ರೆ

Exit mobile version