ಹುಬ್ಬಳ್ಳಿ: ಧಾರವಾಡದ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ಬಾಲಕನೊರ್ವ 100 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ರೀತಿಯಲ್ಲಿ ಬಚಾವ್ (Hubballi News) ಆಗಿದ್ದಾನೆ. ಮಾಲತೇಶ ಮಾವನೂರ (16) ಬಾವಿಗೆ ಬಿದ್ದವನು.
ಮಾನಸಿಕ ಅಸ್ವಸ್ಥನಾಗಿರುವ ಮಾಲತೇಶ ಮನೆಯಿಂದ ಹೊರಬಂದವನೇ ಏಕಾಏಕಿ ಬಾವಿಗೆ ಹಾರಿದ್ದಾನೆ. ಆತ ಬಿದ್ದ ಸದ್ದು ಕೇಳಿ ಸ್ಥಳೀಯರು ಬಾವಿಯತ್ತ ಧಾವಿಸಿದ್ದಾರೆ. ಬಾವಿಯೊಳಗೆ ನೋಡಿದಾಗ ಮಾಲತೇಶ ಬಿದ್ದಿದ್ದು ಕಂಡಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬುಟ್ಟಿಗೆ ಹಗ್ಗ ಕಟ್ಟಿ ಬಾವಿಯೊಳಗೆ ಬಿಟ್ಟು ಬಾಲಕನ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಹಳೇಯ ಬಾವಿಯಾಗಿರುವ ಕಾರಣ ನೀರಿಲ್ಲದೆ ಬತ್ತಿ ಹೋಗಿತ್ತು. ಬಾವಿಯಲ್ಲಿ ಪ್ಲ್ಯಾಸ್ಟಿಕ್, ಮುಳ್ಳುಕಂಟಿಗಳು ತುಂಬಿಕೊಂಡಿತ್ತು. ಹೀಗಾಗಿ ಮಾಲತೇಶ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. 100 ಅಡಿ ಬಾವಿಗೆ ಬಿದ್ದ ರಭಸಕ್ಕೆ ಮಾಲತೇಶ ಕಾಲಿಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಗೊಂಡಿದ್ದ ಮಾಲತೇಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Assault Case : ಮಗು ಅಳುತ್ತಿದ್ದಕ್ಕೆ ಸಿಟ್ಟಾಗಿ ಗೋಡೆಗೆ ಎಸೆದು ಬಿಸಾಡಿದ ಪಾಪಿ ತಂದೆ!
ಜೋಳದ ಬೆಳೆ ತಿಂದ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!
ಚಾಮರಾಜನಗರ: ಜೋಳದ ಬೆಳೆಯನ್ನು ಎತ್ತುಗಳು ತಿಂದು ನಾಶ ಮಾಡಿವೆ ಎಂದು ಪಾಪಿಗಳು ಎತ್ತುಗಳ ಕಾಲುಗಳನ್ನೇ ಕತ್ತರಿಸಿದ್ದಾರೆ. ಈ ಕ್ರೂರ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಒಡೆಯರ ಪಾಳ್ಯದ ಟಿಬೆಟಿಯನ್ ಕ್ಯಾಂಪ್‌ನ ದಿ ವಿಲೇಜ್‌ನಲ್ಲಿ (Chamarajanagar News) ನಡೆದಿದೆ.
ದಿ ವಿಲೇಜ್‌ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಜೋಳದ ಫಸಲನ್ನು ನಾಶ ಮಾಡಿವೆ ಎಂಬ ಕಾರಣಕ್ಕೆ ಮೂವರು ಟಿಬೆಟಿಯನ್ನರು ಈ ಕೃತ್ಯವನ್ನು ಎಸಗಿದ್ದಾರೆ. ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ.
ಇತ್ತ ಎತ್ತುಗಳ ಸ್ಥಿತಿ ಕಂಡು ರೈತ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರ ಮೇಲೆ ಟಿಬೆಟಿಯನ್‌ರ ದರ್ಪಕ್ಕೆ ಕಿಡಿಕಾರಿದ್ದಾರೆ. ಕೃಷಿಗೆ ಈ ಎತ್ತುಗಳೇ ಆಧಾರವಾಗಿದ್ದವು. ಮನೆ ಮಕ್ಕಳಂತೆ ಜೋಪಾನ ಮಾಡಿದ್ದ ಎತ್ತುಗಳ ಕಾಲುಗಳನ್ನು ಕತ್ತರಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ