ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ನಡೆ ಬಗ್ಗೆ ನಾನು ಯಾರ ಮೊರೆಯೂ ಹೋಗಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Hubballi News) ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುರುಘಾ ಮಠವಾಗಲಿ ಮತ್ತು ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಮಾತ್ರವಲ್ಲ, ಯಾರ ಮೊರೆಯೂ ಹೋಗಿಲ್ಲ, ಮಾತನಾಡಿಲ್ಲ ಎಂದು ತಿಳಿಸಿದರು.
ದಿಂಗಾಲೇಶ್ವರ ಶ್ರೀಗಳು ತಮಗೆ ಕ್ಷೇತ್ರ ಬದಲಾವಣೆ ಬಗ್ಗೆ ಕೊಟ್ಟ ಗಡುವು ನಾಳೆಗೆ ಮುಗಿಯುತ್ತದೆಯಲ್ಲ ಎಂಬ ಪ್ರಶ್ನೆಗೆ ನೋಡೋಣವಂತೆ ಗಡುವು ಮುಗಿದ ಮೇಲೆ ಎಂದು ಉತ್ತರಿಸಿದರು.
ಇದನ್ನೂ ಓದಿ: Job Alert: ಸಿಬಿಎಸ್‌ಇಯಲ್ಲಿದೆ ಉದ್ಯೋಗಾವಕಾಶ; ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸಿ
ದಿಂಗಾಲೇಶ್ವರ ಶ್ರೀಗಳ ಸ್ವತಂತ್ರ ಸ್ಪರ್ಧೆ ಬಗ್ಗೆ ಧಾರವಾಡ ಮುರುಘಾ ಮಠದ ಶ್ರೀಗಳು ಕೊಟ್ಟ ಪತ್ರಿಕಾ ಪ್ರಕಟಣೆ ಮತ್ತು ಮರುದಿನ ಹೇಳಿದ ಹೇಳಿಕೆ ಓದಿದ್ದೇನೆ ಆದರೆ ಈ ಬಗ್ಗೆ ತಮಗೆ ಹೆಚ್ಚಿನದೇನು ಗೊತ್ತಿಲ್ಲ ಎಂದು ಈ ವೇಳೆ ತಿಳಿಸಿದರು.
ಅತೃಪ್ತಿ ಸರಿಪಡಿಸುತ್ತೇವೆ
ಚಿತ್ರದುರ್ಗ ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ ಇರುವ ಎಲ್ಲೆಡೆಯೂ ವಿಶೇಷ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದ ಅವರು, ಗೆಲ್ಲುವ ಪಕ್ಷದೊಳಗೆ ಸಣ್ಣ ಪುಟ್ಟ ಗೊಂದಲಗಳು ಸಹಜ. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಲ್ಲಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಸಮಸ್ಯೆ ಇರುವೆಡೆ ವಿಶೇಷ ಗಮನಹರಿಸಿ ಬಗೆಹರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Martand Sun temple : ಜಮ್ಮು-ಕಾಶ್ಮೀರದಲ್ಲಿರುವ ಅತ್ಯಂತ ಪುರಾತನ ಸೂರ್ಯ ದೇವಸ್ಥಾನಕ್ಕೆ ನೀವು ಹೋಗಬಹುದು? ಹೇಗೆ ಗೊತ್ತಾ?
ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಅವರನ್ನು ಇತ್ತೀಚಿಗೆ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಅಲ್ಲಿನ ಎಲ್ಲಾ ಪ್ರಮುಖರನ್ನು ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸುತ್ತೇವೆ ಎಂದು ತಿಳಿಸಿದರು.