Site icon Vistara News

Hubli News: ಶಿಶುನಾಳ ಶರೀಫರ ಜಾತ್ರೆಯಲ್ಲಿ ಡೋಲು ಬಾರಿಸಿ ಸಂಭ್ರಮಿಸಿದ ಪ್ರಲ್ಹಾದ್‌ ಜೋಶಿ

Hubli News Minister Pralhad Joshi offering pooja at Santa Shishunala Sharif Shivayogishwara Temple Jatra Mahotsav

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಸಂತ ಶಿಶುನಾಳ ಶರೀಫ ಶಿವಯೋಗಿಗಳು ಹಾಗೂ ಗುರು ಗೋವಿಂದ ಭಟ್ಟರ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಅವರು ಪಾಲ್ಗೊಂಡು ಪೂಜೆ (Hubli News) ಸಲ್ಲಿಸಿದರು. ನಂತರ ಡೋಲು ಬಾರಿಸಿ ಭಕ್ತರೊಂದಿಗೆ ಸಚಿವರು ಸಂಭ್ರಮಿಸಿದರು.

ಇದನ್ನೂ ಓದಿ: Money Guide: ಇಂದಿನ ಉಳಿತಾಯವೇ ನಾಳೆಯ ಆದಾಯ; ಮಕ್ಕಳಿಗೆ ಈ ಸೇವಿಂಗ್ಸ್‌ ಮಂತ್ರ ಹೀಗೆ ಕಲಿಸಿಕೊಡಿ

ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್‌ ಜೋಶಿ, ಸಂತ ಶಿಶುನಾಳ ಶರೀಫರು ತತ್ವಪದಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸಿದವರು ಎಂದು ಸ್ಮರಿಸಿದ ಅವರು, ಶರೀಫರನ್ನು ಶಿಶುನಾಳದಲ್ಲಿ ಸರ್ವ ಧರ್ಮೀಯರು ಪೂಜಿಸಿ ಆರಾಧಿಸುತ್ತಿರುವುದು ವಿಶೇಷ ಎಂದು ತಿಳಿಸಿದರು.

ಇದನ್ನೂ ಓದಿ: 2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಕೆಗೆ ಮಾ.21 ಕೊನೇ ದಿನ

ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಚಿವರಿಗೆ ಪಕ್ಷದ ಪ್ರಮುಖರು, ಗ್ರಾಮದ ಹಿರಿಯರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು.

Exit mobile version