Site icon Vistara News

ಶವ ತರಲು ಹೊರಟವರೇ ಇಲ್ಲವಾದರು | ಕಲಘಟಗಿ ಬಸ್ಸು- ಕ್ರೂಜರ್‌ ಡಿಕ್ಕಿಯಲ್ಲಿ 3 ಸಾವು

accident

ಹುಬ್ಬಳ್ಳಿ: ಕಲಘಟಗಿ ಬಳಿ ಖಾಸಗಿ ಬಸ್ ಹಾಗೂ ಕ್ರೂಜರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯವಾಗಿದೆ.‌ ಕ್ರೂಜರ್‌ನಲ್ಲಿದ್ದವರು ಮೃತ ಸಂಬಂಧಿಕರೊಬ್ಬರ ಶವ ತರಲು ಹೊರಟಿದ್ದರು ಎಂಬುದು ತಿಳಿದುಬಂದಿದೆ.

ಕಲಘಟಗಿಯ ಧಾರವಾಡ ಕ್ರಾಸ್ ಬಳಿ ರಾತ್ರಿ ವೇಳೆ ಅವಘಡ ನಡೆದಿದೆ. ಮೃತರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ನಂದಿಗಡ ನಿವಾಸಿಗಳು ಎಂದು ಗೊತ್ತಾಗಿದೆ. ಕಲಘಟಗಿಯ ಧಾರವಾಡ ಕ್ರಾಸ್‌ನಲ್ಲಿ ಸೀಬರ್ಡ್ ಬಸ್ ಇವರು ಪ್ರಯಾಣಿಸುತ್ತಿದ್ದ ಕ್ರೂಜರ್‌ಗೆ ಡಿಕ್ಕಿಯಾಗಿತ್ತು. ಇವರು ತಮ್ಮ ಸಂಬಂಧಿಯೊಬ್ಬರ ಮೃತ ದೇಹವನ್ನು ತರಲು ಹುಬ್ಬಳ್ಳಿಗೆ ಹೊರಟಿದ್ದರು.

ಕ್ರೂಜರ್‌ನಲ್ಲಿದ್ದ ಶಿವನಗೌಡ ಮತ್ತು ಅಮೃತ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಕ್ರೂಜರ್ ಚಾಲಕ ಮಾರುತಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕ್ರೂಜರ್‌ನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು. ಇತರ ಗಾಯಾಳುಗಳು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತರ ಸಂಖ್ಯೆ 3ಕ್ಕೆ ಏರಿಕೆ

ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರು,

Exit mobile version