ಹುಬ್ಬಳ್ಳಿ: ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ಸ್ವಚ್ಛ ಆಡಳಿತ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Lok Sabha Election 2024) ತಿಳಿಸಿದರು.
ಹುಬ್ಬಳ್ಳಿಯ ಹೂಗಾರ ಓಣಿಯಲ್ಲಿ ಬುಧವಾರ ಬೆಳಗ್ಗೆ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪ್ರಮುಖವಾಗಿ ಭ್ರಷ್ಟಾಚಾರ ತಡೆಗೆ ಬುನಾದಿ ಹಾಕಿದ್ದಾರೆ. ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ಸಂಪೂರ್ಣ ತೊಡೆದು ಹಾಕುವಲ್ಲಿ ದಿಟ್ಟ ನಿಲುವು ತಳೆದಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಸಂಪುಟದ ಯಾವುದೇ ಸಚಿವರು ಭ್ರಷ್ಟಾಚಾರದಲ್ಲಿ ತೊಡಗದೆ ನಿಷ್ಕಲ್ಮಶ, ನಿಷ್ಕಳಂಕ ಆಡಳಿತ ನೀಡಿದ್ದೇವೆ. ನಮ್ಮ ಯಾರ ಮೇಲೂ ಭ್ರಷ್ಟಾಚಾರದ ಆರೋಪವಿಲ್ಲ. ಮುಂದೆಯೂ ಇದೇ ಮಾದರಿ ಸ್ವಚ್ಛ ಆಡಳಿತ ನೀಡುತ್ತದೆ ಬಿಜೆಪಿ ಸರ್ಕಾರ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.
ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಭಾರತೀಯನನ್ನು ಇಳಿಸುವ ತನಕ ಬಿಡಲ್ಲ; ಇಸ್ರೋ ಅಧ್ಯಕ್ಷ ಮಹತ್ವದ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುರಕ್ಷತೆ, ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನು ಮುಂದುವರೆಸಲು ಮತ್ತೊಮ್ಮೆ ಆಶೀರ್ವದಿಸಿ ಎಂದು ಜೋಶಿ ಮನವಿ ಮಾಡಿದರು.
ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಕಿಮ್ಸ್ ಕಟ್ಟಡ, ಹೆದ್ದಾರಿ ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗಿವೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಾಮಪತ್ರ ಸಲ್ಲಿಕೆ ವೇಳೆ ಸಹ ಜನರು ಸ್ವಯಂ ಧಾವಿಸಿ ಉತ್ತಮ ಸ್ಪಂದನೆ ತೋರಿದ್ದಾರೆ ಎಂದು ಸಚಿವ ಜೋಶಿ ಸಂತಸ ಹಂಚಿಕೊಂಡರು.
ಇದನ್ನೂ ಓದಿ: Lok Sabha Election 2024: ಬೆಂಗಳೂರಿನಲ್ಲಿ ಪುಟ್ಟ ಬಾಲಕಿಯರಿಂದ ಮತದಾನ ಜಾಗೃತಿ
ಈ ವೇಳೆ ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಬಸವರಾಜ ಚಿಕ್ಕಮಠ, ಶಿವಾನಂದ ಹೊಸೂರ್, ಸಿದ್ರಾಮಪ್ಪ ಬಾಳಿಕಾಯಿ, ವೀರಭದ್ರಪ್ಪ ಬಾಳಿಕಾಯಿ, ಈರಣ್ಣ ಜಡಿ, ನೀಲಕ್ಕ ಎತ್ತಿನಮಠ, ರಂಗಾ ಬದ್ದಿ, ವಿಜಯಲಕ್ಷ್ಮಿ ಎಮ್ಮಿ, ಗುರುಸಿದ್ದಮ್ಮ ಸಾಲಿಮಠ, ಪೂಜಾ ರಾಯಕರ್ ಹಾಗೂ ಇತರರು ಇದ್ದರು.