ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್‌ಗೆ (Congress) ಅಧಿಕಾರ ಕೊಟ್ಟರೆ ಹಿಂದೂಗಳು ಸುರಕ್ಷತೆಯಿಂದ ಇರಲು ಸಾಧ್ಯವಿದೆಯೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಕಳವಳ (Lok Sabha Election 2024) ವ್ಯಕ್ತಪಡಿಸಿದರು.
ಶಿಗ್ಗಾವಿ ತಾಲೂಕಿನ ಸವಣೂರಿನ ಸಿಂಪಿಗಲ್ಲಿಯಲ್ಲಿ ಸವಣೂರು -ಕಾರಡಗಿ ಕೇಂದ್ರದ ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಯಾದಗಿರಿಯಲ್ಲಿ ದಲಿತ ಯುವಕನ ಕೊಲೆಯಾಗಿದೆ. ರಾಜ್ಯದಲ್ಲೇ ಈಗ ಈ ಗತಿ. ಇನ್ನು ದೇಶದಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಏನಾಗಬಹುದು ಯೋಚಿಸಿ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾಳ ಮತಾಂತರಕ್ಕೆ ಯತ್ನಿಸಿದ ಆರೋಪಿ ಫಯಾಜ್, ಆಕೆ ಒಪ್ಪದಿದ್ದಾಗ ಅದೆಷ್ಟು ಕ್ರೂರಿಯಾಗಿ ಹತ್ಯೆ ಗೈದಿದ್ದಾನೆ ಎಂದರೆ ನೋಡಿದ ನನಗೇ ತಲೆ ತಿರುಗಿತು ಎಂದು ಹೇಳಿದರು.
ಇದನ್ನೂ ಓದಿ: Rain News: ಪ್ರತ್ಯೇಕ ಮಳೆ ಅವಘಡ; ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ದುರ್ಮರಣ
ಇಂಥ ಕುಕೃತ್ಯವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವೈಯಕ್ತಿಕ ಎಂದರೆ, ಗೃಹ ಸಚಿವ ಪರಮೇಶ್ವರ ಆಕಸ್ಮಿಕ ಎಂದರು. ಇವರಿಗೆ ವೈಯಕ್ತಿಕ-ಆಕಸ್ಮಿಕದ ಅರ್ಥ, ವ್ಯತ್ಯಾಸವೇ ತಿಳಿದಿಲ್ಲ. ಹತ್ಯೆ ಒಂದು ಆಕಸ್ಮಿಕವೇ ಎಂದು ಹರಿಹಾಯ್ದರು.
ಮುಸ್ಲಿಮರು ಹೇಳಿದಂಗೆ ಕೇಳಬೇಕೇ?
ರಾಜ್ಯದಲ್ಲಿ ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಯುತ್ತಿದೆ. ಸರ್ಕಾರವೂ ಅವರ ಪರ ನಿಂತಿದೆ. ಹಾಗಾದರೆ ನಾವು ಮುಸ್ಲಿಮರು ಹೇಳಿದ ಹಾಗೆ ಕೇಳಬೇಕೇ ಎಂದು ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಏನೂ ಮಾಡುವುದಿಲ್ಲ. ಮತಾಂತರ ಮಾಡುವವರನ್ನು ಶಿಕ್ಷಿಸುತ್ತಿಲ್ಲ. ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಎನ್ನುತ್ತಾರೆ. ಆದರೆ, ಜೈ ಶ್ರೀರಾಮ್ ಎಂದವರನ್ನು, ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಎಫ್‌ಐಆರ್ ದಾಖಲಿಸುತ್ತದೆ ಈ ಸರ್ಕಾರ. ಇಲ್ಲಿ ಹಿಂದೂಗಳಿಗೇ ರಕ್ಷಣೆ, ಬೆಲೆ ಇಲ್ಲದಾಗಿದೆ ಎಂದರು.
ವಿಶ್ವಾಸ ಕಳೆದುಕೊಂಡ ಸರ್ಕಾರ
ನೇಹಾಳ ತಂದೆ, ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರೂ ನ್ಯಾಯಕ್ಕಾಗಿ ಬಿಜೆಪಿ, ನನ್ನಲ್ಲಿ ಮೊರೆಯಿಟ್ಟರು. ಮಗಳ ಸಾವಿಗೆ ತಮ್ಮ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ. ನೀವೇ ನ್ಯಾಯ ದಕ್ಕಿಸಿ ಕೊಡಿ ಎಂದು ಬಹಿರಂಗವಾಗಿ ಹೇಳಿದರು. ಕಾಂಗ್ರೆಸ್ ಸರ್ಕಾರ ಅಷ್ಟರ ಮಟ್ಟಿಗೆ ತುಷ್ಟಿಕರಣದಲ್ಲಿ ತೊಡಗಿ ಸ್ವ ಪಕ್ಷದವರ ವಿಶ್ವಾಸವನ್ನೇ ಕಳೆದುಕೊಂಡಿದೆ ಎಂದು ಹೇಳಿದರು.
ಮತ್ತೆ ಮೋದಿ ಬೆಂಬಲಿಸಿ
ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಮಹತ್ವಪೂರ್ಣ ಅಭಿವೃದ್ಧಿ, ಬದಲಾವಣೆ ಕಂಡಿದೆ ಎಂದ ಅವರು, ರಕ್ಷತೆ, ರಕ್ಷಣೆ, ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ನನ್ನನ್ನು 5ನೇ ಬಾರಿ ಆರಿಸಿ ಕಳಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಿ ಎಂದು ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದರು.
ಇದನ್ನೂ ಓದಿ: Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹನುಮಂತ ಗೌಡ ಮುನಿಗೌಡ, ಶಿಗ್ಗಾಂವ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಸುಭಾಷ್ ಗಡಪ್ಪನವರ್, ಗಂಗಾಧರ ಬಾಣದ್, ಮನಾರಪ್ಪ ತಳಲ್ಲಿ, ಮಂಜುನಾಥ್ ಗಾಣಿಗೇರಿ, ಶೋಭಾ ನಿಸ್ಸಿಮಗೌಡರ್, ಶ್ರೀಕಾಂತ್ ದುಂಡಿಗೌಡರ್, ಶಂಕರ್ ಗೌಡ ಪಾಟೀಲ್, ಶೈಲಾ ಮುನಿಗೌಡರ್, ಶಶಿಧರ್ ಎಳಿಗಾರ್, ನಿಂಗಪ್ಪ ಮರಿಗಪ್ಪ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.