Site icon Vistara News

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi statement

ಹುಬ್ಬಳ್ಳಿ: ಭಾರತದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವೇ ಅತ್ಯಗತ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Lok Sabha Election 2024) ಪ್ರತಿಪಾದಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ರಜಪೂತ ಮತ್ತು ಮರಾಠ ರಜಕ್ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲಾ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಸರಿ ಎಂದು ಹೇಳಿದರು.

ದೇಶದಲ್ಲಿ ಎಲ್ಲೇ ಆಗಲಿ ಉಗ್ರ ಚಟುವಟಿಕೆಗಳನ್ನು ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಂಡು ಎದುರಿಸಿದೆ. ಅದರ ಪರಿಣಾಮ ದೇಶದಲ್ಲಿ ಭಯೋತ್ಪಾದನೆ ಕ್ಷೀಣಿಸಿ ಶಾಂತಿ ನೆಲೆಸಿದೆ ಎಂದರು.

ಇದನ್ನೂ ಓದಿ: EPFO Pension: ಇಪಿಎಫ್ ಒ ಪಿಂಚಣಿ ಮೊತ್ತ ಹೆಚ್ಚು ಸಿಗಲು ಏನು ಮಾಡಬೇಕು?

ಪ್ರಧಾನಿ ಮೋದಿ ಅವರ ಖಡಕ್ ನಿಲುವುಗಳಿಂದಾಗಿ ಇಂದು ದೇಶ ಸುರಕ್ಷಿತವಾಗಿದೆ. ಜನರೂ ಶಾಂತಿಯಿಂದ ಜೀವಿಸುವಂತಾಗಿದೆ ಎಂದು ಹೇಳಿದರು.

ಸದಾ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿಯವರ ಕೈ ಬಲಪಡಿಸಲು ಈ ಬಾರಿಯೂ ಸರ್ವ ಸಮಾಜದವರು ಬೆಂಬಲಿಸಬೇಕು ಎಂದು ಸಚಿವ ಪ್ರಲ್ಹಾದ್‌ ಜೋಶಿ ಮನವಿ ಮಾಡಿದರು.

ಈ ಮಹತ್ವದ ಸಭೆಯಲ್ಲಿ ನೆರೆದಿದ್ದ ರಜಪೂತ, ರಜಕ್ ಮರಾಠ ಸಮಾಜದವರು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Tumkur News: ಶಿರಾದಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಸಭೆಯಲ್ಲಿ ರಜಪೂತ, ರಜಕ್ ಮರಾಠ ಸಮಾಜದ ಪ್ರಮುಖರಾದ ವಿದ್ಯಾ ಜಾವುರ, ಸುಭಾಸ ಸಿಂಗ ಜಮಾದಾರ, ವಿಷ್ಣು ಕೆಲಗೇರಿ, ಸತೀಶ್ ಸಂಕ್ಪಾಲ್, ಸಂಜಯ ಕಪಟ್ಕರ್, ಮಂಜುನಾಥ್ ಕಾಟ್ಕರ್, ಶೋಭಾ ಕಿಲ್ಲೇಧಾರ್, ನಾರಾಯಣಸಿಂಗ್, ಅಜಿತ್ ಸಿಂಗ್ ರಜಪೂತ್ ಹಾಗೂ ಸಮಾಜದ ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version