ತುಮಕೂರು: ಪೊಲೀಸರ ಬಗ್ಗೆ ಯಾರು ಏನೇ ಹೇಳಿದರೂ ನಮ್ಮ ಸಂಕಷ್ಟದ ಕಾಲದಲ್ಲಿ ಯಾವುದೇ ಹೊತ್ತಲ್ಲಾದರೂ ಸರಿ ನೆರವಿಗೆ ಬರುವವರು ಅವರೇ. ತುಮಕೂರು ನಗರದ ಟೌನ್ ಹೌಲ್ ಮುಂದೆ ಮಾನವೀಯತೆ ಮೆರೆದ ಪೊಲೀಸರು ಇದಕ್ಕೆ ಇನ್ನೊಂದು ಸಾಕ್ಷ್ಯ ಒದಗಿಸಿದರು.
ಟೌನ್ ಹಾಲ್ ವೃತ್ತದಲ್ಲಿ ರಸ್ತೆ ದಾಟಲು ಬಂದ ಪಾದಚಾರಿಯೊಬ್ಬರು ಪ್ರಜ್ಞೆತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಅಲ್ಲಿಂದ ಎತ್ತಿ ಆಸ್ಪತ್ರಗೆ ದಾಖಲಿಸಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ತುಮಕೂರಿಗೆ ಸಿಎಂ ಆಗಮನದ ಹಿನ್ನೆಲೆ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಗ ಈ ಘಟನೆ ನಡೆದಿದ್ದು, ಪೊಲೀಸರು ಒಂದು ಕ್ಷಣವೂ ವ್ಯರ್ಥ ಮಾಡದೆ ನೆರವಿಗೆ ಧಾವಿಸಿದ್ದಾರೆ. ಮತ್ತು ಅಪಾಯದಿಂದ ಪಾರು ಮಾಡಿದ್ದಾರೆ. ಘಟನಾ ವೇಳೆಯಲ್ಲಿ ಸ್ಥಳದಲ್ಲಿದ್ದ ಎಎಸ್ಪಿ ಕೂಡ ಸಾಥ್ ನೀಡಿದ್ದಾರೆ.
ಪ್ರಜ್ಞೆ ತಪ್ಪಿದ್ದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಜಿಲ್ಲಾಸ್ಪತ್ರೆಗೆ ರವಾನಿಸಿ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ| ತುಮಕೂರು ಕಾರ್ಯಕ್ರಮದಿಂದ ಬಿಜೆಪಿ ನಿರೀಕ್ಷಿಸಿರುವ 7 ಲಾಭಗಳು