ಬೆಂಗಳೂರು: ಪತಿಯೇ ಪತ್ನಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆಗೆದು ಖಾಸಗಿ ಫೋಟೊ ಅಪ್‌ಲೋಡ್ ಮಾಡಿರುವ ಆರೋಪವೊಂದು (Husband assault) ಕೇಳಿ ಬಂದಿದೆ. ಶರವಣ್ ಕುಮಾರ್ ಎಂಬಾತನ ವಿರುದ್ಧ ಪತ್ನಿ ಗರೀಮಾ ಕುಮಾರಿ ಎಂಬುವವರು ದೂರು ನೀಡಿದ್ದಾರೆ.
ಶರವಣ್ ಕುಮಾರ್ ದೆಹಲಿಯ ಇಂಟಲಿಜೆನ್ಸ್ ಬ್ಯೂರೊದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾರೆ. ಈತನ ವಿರುದ್ಧ ಪತ್ನಿ ಗರೀಮಾ ಕುಮಾರಿ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಶರವಣ್ ಕುಮಾರ್ ಹಾಗೂ ಗರೀಮಾ ಕುಮಾರಿ 2006ರಲ್ಲಿ ಮದುವೆ ಆಗಿದ್ದು, ಇವರಿಗೆ 13 ವರ್ಷದ ಮಗಳಿದ್ದಾಳೆ. ಇತ್ತೀಚೆಗೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಶರವಣ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಹಂತದಲ್ಲಿದೆ.
ಇದನ್ನೂ ಓದಿ: Karnataka Weather : ಬೆಂಗಳೂರು ಸೇರಿದಂತೆ ಹಲವೆಡೆ ಇನ್ನೆರಡು ದಿನ ಉರಿ ಬಿಸಿಲು!
ಹೀಗಿರುವಾಗ ಪತ್ನಿ ಗರೀಮಾಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಪತ್ನಿ ಹೆಸರಿನಲ್ಲಿ ನಕಲು ಖಾತೆ ತೆರೆದು ವೈಯಕ್ತಿಕ ಫೋಟೊ, ವಿಡಿಯೊಗಳನ್ನು ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಗರೀಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜತೆಗೆ ಕಳೆದ ಜುಲೈನಲ್ಲಿ ಶರವಣ್ ಬೆಂಗಳೂರಿಗೆ ಬಂದಾಗ ಭೇಟಿ ಮಾಡಿದ್ದರು. ಈ ವೇಳೆ ನನಗೆ ತಿಳಿಯದ ಹಾಗೇ ಕೋಕಾಕೋಲಾದಲ್ಲಿ ಮದ್ಯಪಾನ ಮಿಕ್ಸಿ ಮಾಡಿ ಕೊಟ್ಟಿದ್ದಾರೆ. ಕುಡಿಯುತ್ತಿರುವುದನ್ನು ನನಗೆ ತಿಳಿಯದೆ ಹಾಗೇ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ವಿಡಿಯೊ ಮಾಡಿಕೊಂಡು ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾರೆ. ವಿಚ್ಛೇದನ ನೀಡದಿದ್ದರೆ ಮಗಳನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗರೀಮಾ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ