Site icon Vistara News

Husband Torture : ಪತ್ನಿಗೆ ಕಚ್ಚಿ, ಸಿಗರೇಟ್‌ನಿಂದ ಮೈ-ಕೈ ಸುಟ್ಟಿರುವ ಸೈಕೋ ಪತಿ!

Govindhraju And sumithra

ತುಮಕೂರು: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಸೈಕೋಪಾಥ್‌ ಪತಿಯೊಬ್ಬ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿದ್ದಾನೆ. ಪತಿಯ ನಿರಂತರ ಕಾಟಕ್ಕೆ ಬೇಸತ್ತು ನೊಂದ (Husband Torture) ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಇತ್ತ ಪೊಲೀಸರು ದೂರು ದಾಖಲಿಸಿಕೊಳ್ಳದೇ ರಾಜಿಗೆ ಯತ್ನಿಸಿದ್ದಾರೆ.

ಚಾಲಕನಾಗಿರುವ ಗೋವಿಂದರಾಜು ಎಂಬಾತ ಮೂರು ವರ್ಷಗಳ ಹಿಂದೆ ಸುಮಿತ್ರಾಳನ್ನು ಪ್ರೀತಿಸಿ ಮದುವೆ ಆಗಿದ್ದ. ತುಮಕೂರಿನ ಪಂಡಿತನಹಳ್ಳಿ‌ಯಲ್ಲಿ ವಾಸವಾಗಿದ್ದ, ಇವರಿಬ್ಬರ ದಾಂಪತ್ಯವು ಮೊದಮೊದಲು ಚೆನ್ನಾಗಿಯೇ ಇತ್ತು. ಆದರೆ ದಿನ ಕಳೆದಂತೆ ಗೋವಿಂದರಾಜು ಕುಡಿದು ಬಂದು ದಿನ‌ನಿತ್ಯ ಕಿರುಕುಳ ನೀಡಲು ಶುರು ಮಾಡಿದ್ದಾನೆ ಎಂದು ಸಮಿತ್ರಾ ಆರೋಪಿಸಿದ್ದಾರೆ.

ಗಂಡನ ಕಾಟ ತಾಳಲಾರದೆ ದೂರು ನೀಡಲು ಐದಾರು ಬಾರಿ‌ ಹೆಬ್ಬೂರು ಠಾಣೆ ಹಾಗೂ ಮಹಿಳಾ‌ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ ದೂರು ದಾಖಲಿಸಿಕೊಳ್ಳದೇ ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ. ಇತ್ತ ಪತಿ ಗೋವಿಂದರಾಜು ಸಿಗರೇಟ್‌ನಿಂದ ಮೈ-ಕೈ ಸುಡುವುದು, ಕಚ್ಚುವುದು ಹಾಗೂ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಮಕ್ಕಳಾಗಿಲ್ಲ ಅಂತಲೂ ನಿಂದನೆ ಮಾಡಿದ್ದಾನೆ.

ಸದ್ಯ ಪತಿ ವಿರುದ್ಧ ಪತ್ನಿ ಸುಮಿತ್ರಾ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದು, ತುಮಕೂರು ‌ಮಹಿಳಾ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

ಹೊಡೆದು ಬಡಿದು ಹಿಂಸೆ ಕೊಡುವ ಗಂಡ; ಠಾಣೆ ಮೆಟ್ಟಿಲೇರಿದ ನಾಯಕ ನಟಿ

ಬೆಂಗಳೂರು: ಹೊಡೆದು ಬಡಿದು ದೈಹಿಕವಾಗಿ ನನ್ನ ಪತಿ ನನಗೆ ಹಿಂಸೆಯನ್ನು (Assault Case) ನೀಡುತ್ತಿದ್ದಾರೆ ಎಂದು ಕೋಲಾರ 1990 ಚಿತ್ರದ ನಾಯಕ ನಟಿ ನೇಹಾ ಸರ್ವಾರ್ ಠಾಣೆ ಮೆಟ್ಟಿಲೇರಿದ್ದಾರೆ.

ನಟಿ ನೇಹಾ ಸರ್ವಾರ್‌ ಕಳೆದ 6 ವರ್ಷದ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ರಾಹುಲ್‌ ಎಂಬುವವರನ್ನು ಮದುವೆ ಆಗಿದ್ದಾರೆ. ಆದರೆ ಮದುವೆ ನಂತರ ಕೆಲಸ ಕಾರ್ಯವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ರಾಹುಲ್‌, ನೇಹಾ ಅವರಿಗೆ ದೈಹಿಕ ಹಲ್ಲೆ ಮಾಡಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ನಾಲ್ಕೈದು ವರ್ಷದಿಂದ ನಿರಂತರ ಕಿರುಕುಳ ನೀಡುತ್ತಾ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾನೆ. ಹೊಡೆದು ಬಡಿದು ಮಾಡಿದರೂ ಸಹಿಸಿಕೊಂಡು ಬಂದಿದ್ದೇನೆ. ಆದರೆ ದಿನದಿಂದ ದಿನಕ್ಕೆ ಪತಿ ರಾಹುಲ್‌ ಕಿರುಕುಳ ಹೆಚ್ಚಾಗುತ್ತಿದೆ. ಹೀಗಾಗಿ ಪತಿಯ ಕಿರುಕುಳ ತಾಳಲಾರದೆ ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆತ್ತನಗೆರೆ, ಲೂಸ್ ಮಾದ ಆಭಿನಯದ ಕೋಲಾರ 1990, ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್, ತಮಿಳು ಚಿತ್ರ ಊಟಿ ಸೇರಿ ಹಲವರು ಚಿತ್ರಗಳಲ್ಲಿ ನಾಯಕಿಯಾಗಿ ನೇಹಾ ಅಭಿನಯಿಸಿದ್ದಾರೆ. ನಾಲ್ಕು ಕನ್ನಡ ಹಾಗೂ 2 ತಮಿಳು ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಡಿವೋರ್ಸ್‌ಗಾಗಿ ಪತ್ನಿಯ ಖಾಸಗಿ ಫೋಟೊ ಅಪ್ಲೋಡ್‌ ಮಾಡಿದ ಇನ್ಸ್‌ಪೆಕ್ಟರ್‌

ಬೆಂಗಳೂರು: ಪತಿಯೇ ಪತ್ನಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ತೆಗೆದು ಖಾಸಗಿ ಫೋಟೊ ಅಪ್‌ಲೋಡ್‌ ಮಾಡಿರುವ ಆರೋಪವೊಂದು (Husband assault) ಕೇಳಿ ಬಂದಿದೆ. ಶರವಣ್ ಕುಮಾರ್ ಎಂಬಾತನ ವಿರುದ್ಧ ಪತ್ನಿ ಗರೀಮಾ ಕುಮಾರಿ ಎಂಬುವವರು ದೂರು ನೀಡಿದ್ದಾರೆ.

ಶರವಣ್‌ ಕುಮಾರ್‌ ದೆಹಲಿಯ‌ ಇಂಟಲಿಜೆನ್ಸ್ ಬ್ಯೂರೊದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾರೆ. ಈತನ ವಿರುದ್ಧ ಪತ್ನಿ ಗರೀಮಾ ಕುಮಾರಿ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಶರವಣ್‌ ಕುಮಾರ್‌ ಹಾಗೂ ಗರೀಮಾ ಕುಮಾರಿ 2006ರಲ್ಲಿ ಮದುವೆ ಆಗಿದ್ದು, ಇವರಿಗೆ 13 ವರ್ಷದ‌ ಮಗಳಿದ್ದಾಳೆ. ಇತ್ತೀಚೆಗೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಶರವಣ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಹಂತದಲ್ಲಿದೆ.

ಹೀಗಿರುವಾಗ ಪತ್ನಿ ಗರೀಮಾಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಪತ್ನಿ ಹೆಸರಿನಲ್ಲಿ ನಕಲು ಖಾತೆ ತೆರೆದು ವೈಯಕ್ತಿಕ ಫೋಟೊ, ವಿಡಿಯೊಗಳನ್ನು ಪೋಸ್ಟ್‌ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಗರೀಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜತೆಗೆ ಕಳೆದ ಜುಲೈನಲ್ಲಿ ಶರವಣ್‌ ಬೆಂಗಳೂರಿಗೆ ಬಂದಾಗ ಭೇಟಿ ಮಾಡಿದ್ದರು. ಈ ವೇಳೆ ನನಗೆ ತಿಳಿಯದ ಹಾಗೇ ಕೋಕಾಕೋಲಾದಲ್ಲಿ ಮದ್ಯಪಾನ ಮಿಕ್ಸಿ ಮಾಡಿ ಕೊಟ್ಟಿದ್ದಾರೆ. ಕುಡಿಯುತ್ತಿರುವುದನ್ನು ನನಗೆ ತಿಳಿಯದೆ ಹಾಗೇ ವಿಡಿಯೋ ಮಾಡಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಅಪಲೋಡ್‌ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ವಿಡಿಯೊ ಮಾಡಿಕೊಂಡು ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದಾರೆ. ವಿಚ್ಛೇದನ ನೀಡದಿದ್ದರೆ ಮಗಳನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗರೀಮಾ ಯಲಹಂಕ‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version