Site icon Vistara News

Kannada Sahitya Sammelana : ಕನ್ನಡ ಸಾಹಿತ್ಯ ಸಮ್ಮೇಳನ ಬಹಿಷ್ಕರಿಸಿದ್ದೇನೆ, ಇದು ರಾಜಕೀಯ ಪಕ್ಷದ ಸಮ್ಮೇಳನ: ಎಚ್‌. ವಿಶ್ವನಾಥ್

Rohini sindhuri and D Roopa issue raised in assembly-session

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಧರ್ಮ, ಜಾತಿಯೇತರ ವೇದಿಕೆಯಾಗಿದೆ. ಆದರೆ, ಇತ್ತೀಚೆಗೆ ಅದು ಆಳುವ ಪಕ್ಷದವರ ಕಾರ್ಯಕ್ರಮ ಆಗುತ್ತಿದೆ. ಹೀಗಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Kannada Sahitya Sammelana) ನಾನು ಬಹಿಷ್ಕರಿಸುತ್ತಿದ್ದೇನೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಎಂಬುದು ಒಂದು ಹಬ್ಬ. ಇದು ಪಕ್ಷದ ಕಾರ್ಯಕ್ರಮ ಆಗಬಾರದು. ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡು ಸಮ್ಮೇಳನವನ್ನು ನಡೆಸಬೇಕು. ಸಮ್ಮೇಳನ ರೂಪುರೇಷೆ ಸಹ ಸರಿ ಇಲ್ಲ. ಆಹ್ವಾನ ಪತ್ರಿಕೆಯನ್ನು ನೋಡಿದರೆ ರಾಜಕೀಯ ಪಕ್ಷದ ಸಮ್ಮೇಳನದ ರೀತಿ ಕಾಣಿಸುತ್ತಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರಿನಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ನಾಡು ನುಡಿಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಇಲ್ಲವಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸಭೆಯನ್ನೂ ಮಾಡಲಾಗಿಲ್ಲ. ಸರ್ಕಾರ ಹುಚ್ಚು ಹುಚ್ಚಾಗಿ ವ್ಯವಸ್ಥೆ ಮಾಡುತ್ತಿದೆ. ಬಹಳ ಬೇಸರವಾಗುತ್ತಿದೆ. ಈ ಸಮ್ಮೇಳನವನ್ನು ಧಿಕ್ಕರಿಸಬೇಕು. ಇದೊಂದು ಡೋಂಗಿ ಸಮ್ಮೇಳನವಾಗಿದೆ. ನಾನು ಈ ಸಮ್ಮೇಳನವನ್ನು ಬಹಿಷ್ಕರಿಸುತ್ತಿದ್ದೇನೆ ಎಂದು ವಿಶ್ವನಾಥ್‌ ಹೇಳಿದರು.

ಇದನ್ನೂ ಓದಿ | Rangayana row | ರಂಗಾಯಣಕ್ಕೆ ಡಬಲ್‌ ಟ್ರಬಲ್‌: ಒಂದೆಡೆ ಕಾಂಗ್ರೆಸ್‌ ಪ್ರತಿಭಟನೆ, ಇನ್ನೊಂದೆಡೆ ಸಿಡಿದೆದ್ದ ಕಂಬಾರ!

Exit mobile version