Site icon Vistara News

Karnataka election 2023: ವಿಜಯನಗರಕ್ಕೆ ಮೆಡಿಕಲ್, ನರ್ಸಿಂಗ್, ಲಾ ಕಾಲೇಜು ತರುವೆ; ಅಲ್ಲೀವರೆಗೂ ವಿರಮಿಸಲ್ಲ: ಸಿದ್ದಾರ್ಥ ಸಿಂಗ್

Karnataka election 2023 I will not rest until my dreams come true says Siddharth Singh BJP candidate from Vijayanagar constituency

ಹೊಸಪೇಟೆ: ವಿಜಯನಗರ ಕ್ಷೇತ್ರಕ್ಕೆ ಕೃಷಿ ವಿಶ್ವವಿದ್ಯಾಲಯ (Agricultural University), ಮೆಡಿಕಲ್, ನರ್ಸಿಂಗ್ ಹಾಗೂ ಲಾ ಕಾಲೇಜುಗಳನ್ನು ತರುವವರೆಗೂ ವಿರಮಿಸುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಹೇಳಿದರು.

ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಕಾರಿಗನೂರು ಗ್ರಾಮದಲ್ಲಿ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದ ಅವರು, ದೇಶದ ಜನಪ್ರಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ಪ್ರಚಾರ ನಿಮಿತ್ತ ಹೊಸಪೇಟೆಗೆ ಬಂದಾಗ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು, ರೈತರನ್ನು ಉತ್ತೇಜಿಸುವ ದೂರದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯ ತರುವ ವಿಚಾರ ಪ್ರಸ್ತಾಪಿಸಿದ್ದಾರೆ. ಅವರ ಮಾತು ಶೀಘ್ರ ಈಡೇರುವ ಭರವಸೆ ಇದೆ ಎಂದರು.

ಇದನ್ನೂ ಓದಿ: ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ನಾಳೆ ತೆರೆಗೆ

ವಿವಿಧ ಅಭಿವೃದ್ಧಿಗಳ ಸಾಕಾರದ ಜತೆ ಜತೆಗೆ ಕೃಷಿ, ಶಿಕ್ಷಣ, ಆರೋಗ್ಯ ಸಂಬಂಧಿ ನನ್ನ ಕನಸುಗಳು ನನಸಾಗಿಸಲು ಅವಿರತ ಶ್ರಮಿಸುವೆ ಎಂದು ಅವರು ತಿಳಿಸಿದರು.

ವಿಜಯನಗರ ಕ್ಷೇತ್ರ ಪುಣ್ಯಭೂಮಿ

ವಿಜಯನಗರ ಕ್ಷೇತ್ರ ಅದೃಷ್ಟದ ಕ್ಷೇತ್ರವಾಗಿದೆ. ಒಂದೆಡೆ ಖನಿಜ ಸಂಪತ್ತು, ಇನ್ನೊಂದೆಡೆ ಐತಿಹಾಸಿಕ ಹಂಪಿ ಮತ್ತು ಮತ್ತೊಂದೆಡೆ ತುಂಗಭದ್ರಾ ನದಿ ಹರಿಯುತ್ತಿದ್ದು, ಪುಣ್ಯಭೂಮಿಯಾಗಿದೆ. ಇಂತಹ ಪುಣ್ಯ ನೆಲೆದ ಸೇವಕನಾಗಿ ಆನಂದ್ ಸಿಂಗ್ ಅವರಿಗೆ ಆಶೀರ್ವದಿಸಿದಂತೆ ನನಗೂ ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ಆನಂದ್ ಸಿಂಗ್ ಜನಪರ ಕಾಳಜಿ ಇರುವ ನಾಯಕ

ನಗರಸಭೆ ಸದಸ್ಯ ಪರಮೇಶಪ್ಪ ಮಾತನಾಡಿ, ಸಚಿವ ಆನಂದ್ ಸಿಂಗ್ ಕಾರಿಗನೂರಿಗೆ 75 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಟ್ಟಿದ್ದಾರೆ. ಶಾಲೆಗೆ ಕಾಂಪೌಂಡ್, ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕುಡಿಯುವ ನೀರು, ಬೈಪಾಸ್ ರಸ್ತೆ ನಿರ್ಮಿಸಿ ಕೊಟ್ಟಿದ್ದು ಆನಂದ್ ಸಿಂಗ್ ಯಾವತ್ತೂ ಜನಪರ ಕಾಳಜಿ ಇರುವ ನಾಯಕ ಎಂದರು.

ಈ ವೇಳೆ ಮುಖಂಡರಾದ ಬಜಾರಪ್ಪ, ಸಾಬಣ್ಣ, ರಾಮಕೃಷ್ಟ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಗಂಗಮ್ಮ ನಾಗೇಂದ್ರ, ಸದಸ್ಯ ಜೀವರತ್ನಂ, ಪಕ್ಷದ ಹಿರಿಯರಾದ ಖಂಡೋಜಿರಾವ್, ಹೊನ್ನೂರು ಸ್ವಾಮಿ, ಮಂಜುನಾಥ, ವೆಂಕಟೇಶ್, ನಾಗರಾಜ ಹಾಗೂ ಇತರರಿದ್ದರು.

ಇದನ್ನೂ ಓದಿ: IPL 2023: ಬುಧವಾರದ ಡಬಲ್​ ಹೆಡರ್​​ ಪಂದ್ಯಗಳ ಬಳಿಕ ಐಪಿಎಲ್​ ಅಂಕಪಟ್ಟಿ ಈ ರೀತಿ ಇದೆ

ಎಂಎಲ್‌ಎ ಹೆಸರಿನ ಕೇಕ್ ಕಟ್

ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಶಾಸಕರಾಗುವ ಆತ್ಮವಿಶ್ವಾಸ ಹೊಂದಿದ ಕಾರಿಗನೂರಿನ ಯುವಕರು ಸಿದ್ದಾರ್ಥ ಸಿಂಗ್ ಎಂಎಲ್ ಎ ಎಂಬ ದೊಡ್ಡ ಗಾತ್ರದ ಕೇಕ್ ಅನ್ನು ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಕೈಯಿಂದ ಕಟ್ ಮಾಡಿಸಿ ಅಭಿಮಾನ ಮೆರೆದರು. ಗೆಲುವಿನ ಭರವಸೆಯುಳ್ಳ ಇಲ್ಲಿನ ಜನತೆ ಸಿದ್ದಾರ್ಥಸಿಂಗ್ ಪರ ಘೋಷಣೆ ಕೂಗಿದರು. ಯುವಕರಾದ ಮಂಜುನಾಥ, ಅನಿಲ್, ಪಂಪಾಪತಿ, ಮಜ್ಜಿಗಿ ಬಸಪ್ಪ ಇನ್ನಿತರರಿದ್ದರು.

ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಶಾಸಕರಾಗುವ ಆತ್ಮವಿಶ್ವಾಸ ಹೊಂದಿದ ಕಾರಿಗನೂರಿನ ಯುವಕರು ಸಿದ್ದಾರ್ಥ ಸಿಂಗ್ ಎಂಎಲ್‌ಎ ಎಂಬ ದೊಡ್ಡ ಗಾತ್ರದ ಕೇಕ್ ಅನ್ನು ಅವರ ಕೈಯಿಂದಲೇ ಕಟ್ ಮಾಡಿಸಿ ಅಭಿಮಾನ ಮೆರೆದರು.

ಕುದುರೆ ಮೇಲೆ ಸಿದ್ದಾರ್ಥ ಸಿಂಗ್

ನಗರದ 22ನೇ ವಾರ್ಡಿನ ಮೆಹಬೂಬ ನಗರದಲ್ಲಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಅವರನ್ನು ಕುದುರೆಯ ಮೇಲೆ ಕೂರಿಸಿ ಮತಯಾಚನೆ ಮಾಡಿಸಿ ತಮ್ಮ ನೆಚ್ಚಿನ ಯುವ ನಾಯಕನ ಮೇಲಿನ ಪ್ರೀತಿಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ಕೊಟ್ಟಿದ್ದು ಪಟ್ಟದ ಅಸಲಿ ದಾಖಲೆ

ವಿಜಯನಗರ ಕ್ಷೇತ್ರದ ಸಿರಸನಕಲ್ ಹಾಗೂ ಗುರುಭವನ ಪ್ರದೇಶದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಸಿದ್ದಾರ್ಥಸಿಂಗ್, ಆರೋಪ ಮಾಡಲು ವಿಷಯಗಳು ಸಿಗದ ಹಿನ್ನೆಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Modi in Karnataka : ಮೋದಿ ಬೆಂಗಳೂರು ರೌಂಡ್ಸ್‌ಗೆ ಭರ್ಜರಿ ಸಿದ್ಧತೆ; ಮೇ 6ರಂದು ಇಡೀ ದಿನ ರೋಡ್‌ ಶೋ

ಈವರೆಗೆ ವಿತರಿಸಿರುವ ಆಶ್ರಯ ಹಾಗೂ ಇತರೆ ಪಟ್ಟಾ ಮನೆಗಳ ದಾಖಲೆ ಪತ್ರಗಳು ನಕಲಿ ಎಂದು ಕಾಂಗ್ರೆಸ್ ಮುಖಂಡರು ಹೇಳಿ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ನಕಲಿ ಮಾಡುವುದು ಅಪರಾಧ ಎಂಬ ಪರಿಜ್ಞಾನ ಎಲ್ಲರಿಗೂ ಗೊತ್ತಿದ್ದು, ಅವರೇಕೆ ಹೀಗೆ ಅಪಪ್ರಚಾರ ಮಾಡುತಿದ್ದಾರೆಯೋ ತಿಳಿಯುತಿಲ್ಲ. ಸರ್ಕಾರ ಮಟ್ಟದಲ್ಲಿ ಸಾಮಾನ್ಯ ಜನರಿಗೆ, ಮತದಾರರಿಗೆ ಮೋಸ ಮಾಡುವಂಥ ಸಣ್ಣ ಮಟ್ಟದ ಆಲೋಚನೆ ನಮ್ಮಲಿಲ್ಲ. ನೀತಿ ಸಂಹಿತೆ ಇರುವ ಕಾರಣಕ್ಕೆ ಸಾಂಕೇತಿಕವಾಗಿ ಕೆಲವರಿಗೆ ಮನೆಯ ಪಟ್ಟಾ ನೀಡಲಾಗಿದೆ. ಚುನಾವಣೆ ಬಳಿಕ ಫಲಾನುಭವಿಗಳ ಮನೆ ಮನೆಗೆ ತೆರಳಿ ಪಟ್ಟಾದ ದಾಖಲೆ ತಲುಪಿಸಲಾಗುವುದು ಎಂದರು.

ವಿವಿಧೆಡೆ ಮತ ಬೇಟೆ

ಸಂಕ್ಲಾಪುರ, 21ನೇ ವಾರ್ಡಿನ ಸುಡುಗಾಡು ಸಿದ್ಧರ ಆಶ್ರಯ ಕಾಲೋನಿ, ಸಿರಸಿನಕಲ್ ಮತ್ತು ಗುರುಭವನ ಪ್ರದೇಶ, ಮೆಹಬೂಬ ನಗರ, ಜಂಬುನಾಥ ರಸ್ತೆಯ ಪ್ರದೇಶದಲ್ಲಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಕಮಲದ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು.

Exit mobile version