ರಾಯಚೂರು: ಹೊಸಪೇಟೆಯಲ್ಲಿ ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಬೈದ ಪ್ರಸಂಗ ನಡೆದ ಬೆನ್ನಲ್ಲೇ ಅಂತಹುದೇ ಒಂದು ಘಟನೆ (Free Bus Rides) ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬಸ್ ಟಿಕೆಟ್‌ಗೆ ನಾನು ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ ಎಂದು ಅಜ್ಜಿಯೊಬ್ಬರು ಪಟ್ಟುಹಿಡಿದಿದ್ದು, ಅವರನ್ನು ಮನವೊಲಿಸಲು ನಿರ್ವಾಹಕ ಹೈರಾಣಾಗಿದ್ದಾರೆ.
ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಹೀಗಾಗಿ ವಿವಿಧೆಡೆ ವಿದ್ಯುತ್ ಬಿಲ್ ಕಟ್ಟಲು, ಬಸ್ ಟಿಕೆಟ್ ಪಡೆಯಲು ಸಾರ್ವಜನಿಕರು ಸಾರ್ವಜನಿಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅದೇ ರೀತಿ ಜಿಲ್ಲೆಯಲ್ಲಿ ಮಸ್ಕಿಯಿಂದ ಸಿಂಧನೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಅಜ್ಜಿ ಟಿಕೆಟ್ ಪಡೆಯೋದಿಲ್ಲ, ಸರ್ಕಾರದಿಂದ ಬಸ್ ಪ್ರಯಾಣ ಉಚಿತ ಎಂದು ನಮಗೆಲ್ಲ ಹೇಳಿರುವುದಾಗಿ ತಿಳಿಸಿದ್ದಾರೆ.
ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಟಿಕೆಟ್ ಕೊಡಬ್ಯಾಡ ಎಂದಿದ್ದಾರೆ. ಹೀಗಾಗಿ ಟಿಕೆಟ್ ಕೊಡಲ್ಲ, ಬೇಕಾದರೆ ಬಸ್‌ನಿಂದ ಇಳಿಸು, ನಾನು ಗೆದ್ದ ಶಾಸಕರನ್ನು ಕೇಳುತ್ತೇನೆ ಎಂದು ವೃದ್ಧೆ ಹೇಳಿದ್ದಾರೆ. ಬಸ್‌ನಲ್ಲಿ ಫ್ರೀ ಎಂದರು, ಈಗ ಮಾರ್ಗಮಧ್ಯೆ ಇಳಿಸಿದರೆ ನಾವು ಏನು ಅಡವಿ ಹೆಣ ಆಗಬೇಕಾ ಎಂದು ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | CM Siddaramaiah: ಹಾವೇರಿ ಗೋಲಿಬಾರ್‌ಗೆ ಮತ್ತೆ ಅವಕಾಶ ಮಾಡಬೇಡಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಕರೆಂಟ್ ಬಿಲ್ ಇಲ್ಲ, ಬಸ್‌ಗೆ ರೊಕ್ಕ ಇಲ್ಲ ಎಂದು ಹೇಳಿದ್ದರು, ಅದಕ್ಕೆ ವೋಟು ಹಾಕಿದ್ದೀನಿ. ಹೀಗಾಗಿ ಟಿಕೆಟ್ ತೆಗೆದುಕೊಳ್ಳಲ್ಲ ಎಂದು ಪಟ್ಟುಹಿಡಿದಿದ್ದರಿಂದ ಅವರನ್ನು ಮನವೊಲಿಸಲು ನಿರ್ವಾಹಕ ಹೈರಾಣಾದರು. ಕೆಲ ಹೊತ್ತಿನ ಬಳಿಕ ಟಿಕೆಟ್ ಪಡೆದು ಅಜ್ಜಿ ಪ್ರಯಾಣ ಮಾಡಿದ್ದಾರೆ. ಸದ್ಯ ಅಜ್ಜಿ ಹಾಗೂ ನಿರ್ವಾಹಕನ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದ ಮಹಿಳೆ; ಕೈ ನಾಯಕರಿಗೆ ಹಿಡಿಶಾಪ!
ವಿಜಯನಗರ: ಅಧಿಕಾರಕ್ಕೆ ಬಂದರೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus Rides) ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಗ್ಯಾರಂಟಿ ನೀಡಿದ್ದರು. ಅದರ ಭಾಗವಾಗಿ ಮೊದಲ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಈ ನಡುವೆ ಹೊಸಪೇಟೆಯಲ್ಲಿ ಸಾರಿಗೆ ಬಸ್‌ನಲ್ಲಿ ಟಿಕೆಟ್ ತೆಗೆದೊಕೊಳ್ಳಿ ಎಂದು ಕೇಳಿದ್ದಕ್ಕೆ ಮಹಿಳೆಯೊಬ್ಬರು, ಕಾಂಗ್ರೆಸ್ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದಿರುವ ಪ್ರಸಂಗ ನಡೆದಿದೆ.
ಹೊಸಪೇಟೆಯಲ್ಲಿ ಪ್ರಯಾಣಿಸುವಾಗ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಮೊದಲಿಗೆ ನಿರ್ವಾಹಕನ ವಿರುದ್ಧ ಕಿಡಿಕಾರಿರುವ ಮಹಿಳೆ, ಹೆಣ್ಮಕ್ಕಳಿಗೆ ಬಸ್ ದರ ಫ್ರೀ ಎಂದಿದ್ದಾರಲ್ರೀ ಎಂದು ಹೇಳಿದ್ದಾರೆ. ಅದಕ್ಕೆ ಕಂಡಕ್ಟರ್ ಇನ್ನೂ ಫ್ರೀ ಟಿಕೆಟ್ ಘೋಷಣೆ ಮಾಡಿಲ್ಲ. ನಮಗೆ ಆದೇಶ ಕೂಡಾ ಬಂದಿಲ್ಲ. ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕೋಪಗೊಂಡ ಮಹಿಳೆ, ಕಾಂಗ್ರೆಸ್ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಬೈದಿದ್ದಾರೆ.
ಇದನ್ನೂ ಓದಿ | D.K. Shivakumar: ಕೇಸರಿ ಬಟ್ಟೆ ಹಾಕ್ಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರ; ಕೇಸರೀಕರಣಕ್ಕೆ ಅವಕಾಶವಿಲ್ಲ: ಪೊಲೀಸರಿಗೆ ಡಿಕೆಶಿ ವಾರ್ನಿಂಗ್
ಮಹಿಳೆಯರಿಗೆ ಫ್ರೀ ಅಂದಾನಲ್ರೀ… ಎಂದು ಅಶ್ಲೀಲ ಪದ ಬಳಸಿ ಹಿಗ್ಗಾಮುಗ್ಗಾ ಬೈದಿರುವ ಮಹಿಳೆ, ಗಂಡ, ಮಕ್ಕಳು ದುಡಿದಿದ್ದನ್ನು ತಿನ್ನೋ ….. ಮಗ ಎಂದು ಕಾಂಗ್ರೆಸ್ ನಾಯಕನ ಬಗ್ಗೆ ಬೈದಿದ್ದಾರೆ. ಈ ವೇಳೆ ಅಕ್ಕ ಪಕ್ಕ ಕುಳಿತಿದ್ದ ಪ್ರಯಾಣಿಕರು ನಸು ನಕ್ಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.