ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಬದಲಿಗೆ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ನೇಮಿಸಲಾಗಿದೆ. ಜತೆಗೆ ಅನೇಕ ಹಿರಿಯ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ಆಯುಕ್ತರಾಗಿದ್ದ ಎನ್. ಮಂಜುನಾಥ ಪ್ರಸಾದ್ ಅವರ ಸ್ಥಾನಕ್ಕೆ ಗೌರವ್ ಗುಪ್ತ ಅವರನ್ನು 2021ರ ಮಾರ್ಚ್‌ನಲ್ಲಿ ನೇಮಕ ಮಾಡಲಾಗಿತ್ತು. ಆಗಿನ್ನೂ ಕೊರೋನಾ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಗುಪ್ತಾ ಎದುರು ಸವಾಲುಗಳ ಪರ್ವತವೇ ಇತ್ತು. ರಾಜ್ಯದ ಇತರೆಡೆಗಳಂತೆಯೇ ಬೆಂಗಳೂರಿನಲ್ಲೂ ಆಸ್ಪತ್ರೆ, ಆಕ್ಸಿಜನ್ ಸೇರಿ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ಈ ನಡುವೆ ಬಿಬಿಎಂಪಿ ಸ್ವರೂಪದಲ್ಲಿ ಬದಲಾವಣೆ ಮಾಡಲಾಯಿತು. ಆಯುಕ್ತ ಹುದ್ದೆಯನ್ನು ಮುಖ್ಯ ಆಯುಕ್ತ ಎಂದು ಬದಲಾಯಿಸಲಾಯಿತು. ಕೊರೋನಾ ಸೋಮಕು ಕಡಿಮೆ ಆದ ಸಂದರ್ಭದಲ್ಲಿ ಮತ್ತೆ ಅಭಿವೃದ್ಧಿಯತ್ತ ಗಮನಹರಿಸುವ ಹೊಣೆಗಾರಿಕೆ ಇತ್ತು. ಈ ನಡುವೆ ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯವಾಗಿದ್ದರಿಂದ ಬಜೆಟ್ ಘೋಷಣೆ, ಅನುಷ್ಠಾನವನ್ನೂ ನಡೆಸಬೇಕಾಯಿತು. ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಮುಖ್ಯ ಆಯುಕ್ತರಾಗಿದ್ದ ಗುಪ್ತ ಅವರನ್ನು ಇದೀಗ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ವರ್ಗಾವಣೆ ಆಗಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿಯಾಗಿದ್ದ ತುಷಾರ್ ಗಿರಿನಾಥ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
16 ಐಎಎಸ್ ಅಧಿಕಾರಿಗಳ ವರ್ಗಾವಣೆ
ಗೌರವ್ ಗುಪ್ತ ಹಾಗೂ ತುಷಾರ್ ಗಿರಿನಾಥ್ ಸೇರಿ ಒಟ್ಟು 15 ಐಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿರುವ ಹುದ್ದೆಗಳಿಗೆ ವರ್ವಾಗಣೆ ಮಾಡಲಾಗಿದೆ.
- ಟಿ.ಕೆ. ಅನಿಲ್ ಕುಮಾರ್ -ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ(ಪ್ರಭಾರ)
- ಪೊನ್ನುರಾಜ್ ವಿ. DPAR (ಇ-ಆಡಳಿತ) ಕಾರ್ಯದರ್ಶಿ, ಹಾಗೂ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ(ಪ್ರಭಾರ)
- ಮನೋಜ್ ಜೈನ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ
- ಖುಷ್ಬೂ ಜಿ ಚೌಧರಿ, ನವದೆಹಲಿಯ ಕರ್ನಾಟಕ ಭವನದ ಡೆಪ್ಯೂಟಿ ರೆಸಿಡೆಂಟ್ ಕಮಿಷನರ್
- ಕ್ಯಾ. ಡಾ. ಕೆ. ರಾಜೇಂದ್ರ, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ
- ಹಿರೇಮಠ್ ಎಂ.ಜಿ., ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ವ್ಯವಸ್ಥಾಪಕ ನಿರ್ದೇಶಕ
- ನಿತೇಶ್ ಪಾಟೀಲ್. ಬೆಳಗಾವಿ ಜಿಲ್ಲಾಧಿಕಾರಿ
- ಗುರುದತ್ತ ಹೆಗಡೆ., ಧಾರವಾಡ ಜಿಲ್ಲಾಧಿಕಾರಿ
- ಡಾ. ವೈ. ನವೀನ್ ಭಟ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ದೇಶಕ
- ಟಿ. ಭೂಪಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ
- ಡಾ. ದಿಲೀಶ ಸಸಿ. ಎಲೆಕ್ಟ್ರಾನಿಕ್ ಡೆಲಿವರಿ ಸಿಟಿಜನ್ ಸರ್ವಿಸಸ್ (EDCS), DPAR (e-Gov) ನಿರ್ದೇಶಕ
- ಎಸ್. ಭರತ್, NWKRTC ವ್ಯವಸ್ಥಾಪಕ ನಿರ್ದೇಶಕ
- ಎಂ. ಶಿಲ್ಪಾ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಜಂಟಿ ವ್ಯವಸ್ಥಾಪಕ ನಿರ್ದೇಶಕಿ
ಇದನ್ನೂ ಓದಿ | ಜ್ವರ ಬಂದರೆ ಸಾಫ್ಟ್‌ವೇರ್ ಇಂಜಿನಿಯರ್ ಬಳಿ ಹೋಗುವ BBMP: ಕಸದ ಲಾರಿ ಕುರಿತ ತಪಾಸಣೆ ನಾಟಕ