Site icon Vistara News

ICSE Result | ಶಿರಸಿ ಮೂಲದ ವಿದ್ಯಾರ್ಥಿನಿ ಭಾರತಕ್ಕೆ 3ನೇ ರ‍್ಯಾಂಕ್‌

exam

ಉತ್ತರಕನ್ನಡ: ಇಲ್ಲಿನ ಶಿರಸಿ ಮೂಲದ ವಿದ್ಯಾರ್ಥಿನಿ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ (ICSE Result) ಭಾರತಕ್ಕೆ 3ನೇ ಸ್ಥಾನ ಹಾಗೂ ರಾಜ್ಯಕ್ಕೆ 2ನೇ ಸ್ಥಾನ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಹರ್ಶಿತಾ ಎಸ್ ಬೆಹೆರಾ ಎಂಬ ವಿದ್ಯಾರ್ಥಿನಿ ಶೇ. 99.4 ಅಂಕಗಳಿಸಿ ಕೀರ್ತಿ ಹೆಚ್ಚಿಸಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಯಾಗಿರುವ ಸುಬ್ರತ್ ಕುಮಾರ ಹಾಗೂ ಪಂಕಜಾ ಅವರ ಪುತ್ರಿ ಹರ್ಶಿತಾ ಬೆಂಗಳೂರಿನ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಹರ್ಶಿತಾ ತಾಯಿ ಪಂಕಜಾ ಜೋಗಳೆಕರ್ ಶಿರಸಿಯ ಶ್ರದ್ದಾನಂದ ಗಲ್ಲಿಯ ನಿವಾಸಿಯಾಗಿದ್ದರು. ಅವರು ವಿವಾಹದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ | ICSE Result 2022 | ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ. 99.97 ಮಂದಿ ಉತ್ತೀರ್ಣ

Exit mobile version