ಬಾಗಲಕೋಟೆ: ಇದು ದೇಶ ಬಚಾವ್ ಎಲೆಕ್ಷನ್. ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಅವರು ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ. ಫಸ್ಟ್ ಟೈಂ ಕ್ಯಾನ್ಸರ್ ಬಂದರೆ ಉಳಿಯುತ್ತಾರೆ, ಎರಡನೇ ಬಾರಿ ಬಂದರೂ ಉಳಿಯುತ್ತಾರೆ, ಆದರೆ ಮೂರನೇ ಬಾರಿ ಬಂದರೆ ನಮ್ಮನ್ನೆಲ್ಲರನ್ನೂ ತಗೊಂಡು ಹೋಗುತ್ತೆ ಎಂದು ಪರೋಕ್ಷವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರ ಅವನತಿ ಆಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಸಂಯುಕ್ತಾ, ಶಿವಾನಂದ ಪಾಟೀಲ್ ಪುತ್ರಿ ಅಲ್ಲ, ನನ್ನ ಮಗಳ ಇದ್ದಂತೆ. ಈ ಎಲೆಕ್ಷನ್ ಶಿವಾನಂದ ಪಾಟೀಲ್‌ರದ್ದು ಅಲ್ಲ, ಜಮೀರ್‌ದು ಅಲ್ಲ, ಹಾಗೆಯೇ ಮೇಟಿ ಅವರದೂ ಅಲ್ಲ. ಈ ಬಾರಿ ದೇಶ ಬಚಾವ್ ಮಾಡಲು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕರೆ ನೀಡಿದರು.
ಇದನ್ನೂ ಓದಿ | Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ
ನಮ್ಮ ಆಡಳಿತದಲ್ಲಿ ಐದು ಅಂಶಗಳಿವೆ. ಎರಡು ಸಾವಿರ ರೂ., ಉಚಿತ ವಿದ್ಯುತ್, ಬಸ್ ಫ್ರಿ, ಅನ್ನಭಾಗ್ಯ, ಇದನ್ನೆಲ್ಲಾ ನಾವು ಮಾಡಿದ್ದೇವೆ. ನಮ್ಮ ಕೋಮಿನ 7 ಲಕ್ಷ ಜನ ಈ ಯೋಜನೆಗಳ ಉಪಯೋಗ ಪಡೆಯುತ್ತಿದ್ದಾರೆ. ರಾಹುಲ್ ಗಾಂಧಿ, ಖರ್ಗೆ ನಮ್ಮ ಸರ್ಕಾರ ಬಂದರೆ ಐದು ಯೋಜನೆ ಜಾರಿ ತರುತೀವೆ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಮಹಿಳೆಗೆ 1 ಲಕ್ಷ ಕೊಡುತ್ತಾರೆ ಎಂದು ತಿಳಿಸಿದರು.
ಪಾಜಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ರೆ ಗುಂಡಿಟ್ಟು ಕೊಲ್ಲಬೇಕು
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದೇವೆ. ನಮ್ಮ ಸರ್ಕಾರ ಬಂದಮೇಲೆ ಕೋರ್ಟ್‌ನಿಂದ ಡೈರೆಕ್ಷನ್ ತೆಗೆದುಕೊಳ್ಳಬೇಕು. ನಾಲ್ಕು ಜನ ಬಿಜೆಪಿ ಅವರನ್ನು ಕಳುಹಿಸಿಬಿಟ್ಟು ಪಾಕಿಸ್ತಾನ ಜಿಂದಾಬಾದ್ ಜೈಕಾರ ಹಾಕಿಸುತ್ತಾರೆ. ಅಂತಹವರನ್ನು ಪೊಲೀಸರಿಗೆ ಪರ್ಮಿಷನ್ ಕೊಟ್ಟರೆ ಅಲ್ಲೇ ಶೂಟ್ & ಸೈಟ್ ಆರ್ಡರ್ ಆಗಬೇಕು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಇದನ್ನೂ ಓದಿ | Rahul Gandhi: ಪ್ರಧಾನಿ ದ್ವಾರಕಾ ಪೂಜೆ ಒಂದು ನಾಟಕ; ಮತ್ತೆ ಸನಾತನ ಆಚರಣೆ ಬಗ್ಗೆ ರಾಹುಲ್ ಪ್ರಶ್ನೆ
ನಾವ್ಯಾರು (ಮುಸ್ಲಿಂರು) ದೇಶ ದ್ರೋಹಿಗಳಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಇಂಡಿಯಾ ಗೇಟ್ ಕಡೆ ಹೋಗಿ ನೋಡಿ ಲಿಸ್ಟ್ ಇದೆ. ಶೇ.60 ಮುಸ್ಲಿಂರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ದೇಶ ನಮ್ಮದು, ನಮ್ಮನ್ನು ಇಲ್ಲಿಗೆ ಕರೆಸಿದ ಉದ್ದೇಶ ಈ ಬಾರಿ ಶೇ.95 ವೋಟಿಂಗ್ ಆಗಲು ಎಂದ ಅವರು, ಮೊದಲು ಎಲೆಕ್ಷನ್ ಡಬ್ಬಿ ಇತ್ತು, ಹೇಗೋ ನಡೆಯುತ್ತಿತ್ತು. ಈಗ ಇವಿಎಂ ಮಷಿನ್ ಇದೆ. ಯಾವ ಸಮುದಾಯ ಎಷ್ಟು ಮತದಾನ ಮಾಡಿದೆ ಎಂಬುವುದು ಗೊತ್ತಾಗುತ್ತೆ. ಹಾಗಾಗಿ ಮುಸ್ಲಿಂ ಮತಗಳು ಹೆಚ್ವಿನ ಸಂಖ್ಯೆಯಲ್ಲಿ ಬರಬೇಕು ಎಂದು ಸಮುದಾಯಕ್ಕೆ ಸಚಿವರು ಕರೆ ನೀಡಿದರು.