Site icon Vistara News

Pramod Muthalik: ಬಿಜೆಪಿ ನಾಯಕರು ಮನೆಗೆ ಬಂದು ಮೋದಿ ಹೆಸರಲ್ಲಿ ಮತ ಕೇಳಿದರೆ ಚಪ್ಪಲಿಯಿಂದ ಬಾರಿಸಿ: ಪ್ರಮೋದ್‌ ಮುತಾಲಿಕ್

If BJP leaders come home and ask for votes in the name of Modi beat them up with slippers Pramod Muthalik

ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಆರೋಪ-ಪ್ರತ್ಯಾರೋಪಗಳು, ಪರಸ್ಪರ ಕೆಸರೆರಚಾಟಗಳು ಹೆಚ್ಚಾಗ ತೊಡಗಿವೆ. ಈ ಮಧ್ಯೆ ಬಿಜೆಪಿ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ, ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್‌ ಮುತಾಲಿಕ್‌ (pramod muthalik) ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. “ಒಂದು ವೇಳೆ ಬಿಜೆಪಿ ನಾಯಕರು ಮನೆ ಮನೆಗೆ ಪ್ರಚಾರಕ್ಕೆ ಬಂದಾಗ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳಿದರೆ, ಅವರಿಗೆ ಚಪ್ಪಲಿಯಲ್ಲಿ ಹೊಡೆದು ಕಳುಹಿಸಿ” ಎಂದು ಕರೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ನಾಲಾಯಕ್‌ಗಳಾಗಿದ್ದಾರೆ. ಈ ನಿಷ್ಪ್ರಯೋಜಕರು ಮತ ಕೇಳಲು ಮೋದಿಯವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಕಾರ್ಯಕರ್ತರ ಸಮಸ್ಯೆ ಏನೆಂಬುದನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಪ್ರಧಾನಿ ಮೋದಿ ಹೆಸರನ್ನು ಬಳಸದೇ ಮತ ಕೇಳಲಿ ಎಂದು ಮುತಾಲಿಕ್ ಸವಾಲು ಹಾಕಿದ್ದಾರೆ.

ನಾನು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ. ಅವರು ಈ ಬಾರಿ ಪ್ರಚಾರಕ್ಕೆ ಬಳಸುವ ಪಾಂಪ್ಲೆಟ್‌, ಬ್ಯಾನರ್‌, ಹೋರ್ಡಿಂಗ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದೂ ಫೋಟೊಗಳನ್ನು ಬಳಸದೇ ಕೇವಲ ಮಾಡಿದ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಬೇಕು. ಅಲ್ಲದೆ, ಹಿಂದುತ್ವಕ್ಕಾಗಿ ಕೈಗೊಂಡ ಕ್ರಮಗಳೇನು? ಗೋವುಗಳ ರಕ್ಷಣೆಗೆ ಏನು ಮಾಡಲಾಗಿದೆ ಎಂಬುದನ್ನೂ ತಿಳಿಸಲಿ ಎಂದು ಮುತಾಲಿಕ್‌ ಹೇಳಿದರು.

ಇದನ್ನೂ ಓದಿ: NPS News : ಕೇಂದ್ರದಿಂದ ಕೆಲವರಿಗಷ್ಟೇ ಓಪಿಎಸ್‌ಗೆ ಶಿಫ್ಟ್‌ ಆಗಲು ಅವಕಾಶ; ರಾಜ್ಯದಲ್ಲಿಯೂ ಜಾರಿಗೆ ಒತ್ತಾಯ

ನಾನು ಮತದಾರರಲ್ಲಿ ಮಾಡಿಕೊಳ್ಳುವ ಒಂದು ಮನವಿ ಏನೆಂದರೆ, ಈ ರೀತಿ ಮೋದಿ ಹೆಸರನ್ನು ಬಳಸಿಕೊಂಡು ಬರುವವರಿಗೆ ಮತ ನೀಡಬೇಡಿ, ನಿಮ್ಮ ಮತಗಳನ್ನು ಮೋದಿಗೆ ನೀಡಿ ಎಂದು ಕೇಳಿದ್ದೇ ಆದಲ್ಲಿ ಅವರಿಗೆ ಚಪ್ಪಲಿಯಿಂದ ಹೊಡೆದು ಕಳುಹಿಸಿ ಎಂದು ಮುತಾಲಿಕ್‌ ಪ್ರಚೋದನಕಾರಿಯಾಗಿ ಹೇಳಿದರು.

Exit mobile version