Site icon Vistara News

COVID Subvariant JN.1: ಕೊರೊನಾ ಲಕ್ಷಣ ಕಂಡು ಬಂದ್ರೆ ಕಡ್ಡಾಯ ಪರೀಕ್ಷೆ ಮಾಡಿಸಿ: ದಿನೇಶ್‌ ಗುಂಡೂರಾವ್‌

Dinesh gundu rao

ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN.1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಹೈ ಅಲರ್ಟ್‌ ಆಗಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಶನಿವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು, ಕೇರಳದಲ್ಲಿ ಕೋವಿಡ್ ಪ್ರಕರಣಗಳು (COVID 19 updates) ಹೆಚ್ಚಾಗಿರುವ ಬಗ್ಗೆ ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಈವರೆಗೆ 58 ಕೋವಿಡ್ ಪಾಸಿಟಿವ್ ಕೇಸ್ ಇವೆ. ಈ ಪೈಕಿ 11 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ತಿಂಗಳಿನಲ್ಲಿ ಕೊರೊನಾದಿಂದ ಒಬ್ಬರು ಸಾವನ್ನಪ್ಪಿದ್ದು, ಈಗ ಕರೊನಾ ಹೆಚ್ಚಾಗುತ್ತದೆ ಎಂಬ ಬಗ್ಗೆ ಮಾಹಿತಿಯಿದೆ. ಹೀಗಾಗಿ ಕೇಂದ್ರದ ಅಧಿಕಾರಿಗಳ ಜತೆ ನಮ್ಮ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಐಎಲ್‌ಐ ಹಾಗೂ ಸಾರಿ ಪ್ರಕರಣ ಕಂಡು ಬಂದರೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಕೊರೊನಾ ಲಕ್ಷಣ ಕಂಡು ಬಂದರೆ ಕಡ್ಡಾಯ ಪರೀಕ್ಷೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವರದಿ ಬಂದ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದೆಯಾ ಎಂಬುವುದು ಗೊತ್ತಾಗುತ್ತೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ, ಯಾವುದೇ ಗಂಭೀರ ತೊಂದರೆ ಆಗಲ್ಲ. ಯಾರಿಗೆ ರೋಗ ಲಕ್ಷಣಗಳು ಕಂಡು ಬಂದರೆ ಪರೀಕ್ಷಿಸಿಕೊಳ್ಳಿ. ಕೊರೊನಾ ಪರೀಕ್ಷೆಗೆ ಹೆಚ್ಚಿನ ಕಿಟ್ ಖರೀದೀಗೆ ಸೂಚಿಸಲಾಗಿದೆ. ಮುಂದಿನ ಮೂರು ತಿಂಗಳಿಗೆ ಅಗತ್ಯವಿರುವಷ್ಟು ಟೆಸ್ಟಿಂಗ್ ಕಿಟ್ ಖರೀದಿಗೆ ಸೂಚಿಸಲಾಗಿದ್ದು, ಎಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿಗಳಿಗೆ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಅನುದಾನ ಘೋಷಣೆಯಾದರೆ ಸಾಲದು, ಕಲ್ಯಾಣವೂ ಆಗಬೇಕು

ಆಸ್ಪತ್ರೆಗಳಲ್ಲಿ ನ್ಯೂನ್ಯತೆ ಕಂಡು ಬಂದರೆ ಸರಿಪಡಿಸುವಂತೆ ಸೂಚಿಸಿದ ಅವರು, ಮಂಗಳವಾರ ಡಾ.ರವಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ. ತಜ್ಞರಿಂದ ಸಲಹೆಗಳನ್ನು ಪಡೆಯುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡುವುದು ಅಗತ್ಯವಿಲ್ಲ. ಗಡಿಯಲ್ಲಿ ಬರುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲ್ಲ. ಕೇಸ್ ಜಾಸ್ತಿಯಾದರೆ ಮಾತ್ರ ತಪಾಸಣೆ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ವಿಚಾರ ಪ್ರತಿಕ್ರಿಯಿಸಿ, ಸಿಐಡಿ ಅಧಿಕಾರಿಗಳು ಇವತ್ತು ನಮ್ಮ ಜತೆ ಚರ್ಚೆ ನಡೆಸಿದರು. ಕಾನೂನಿನಲ್ಲಿ ಕೆಲವು ತೊಡಕು ಇವೆ, ಸರಿ ಪಡಿಸಲು ಸಲಹೆ ನೀಡಲಾಗಿದೆ. ಮೊನ್ನೆ ಬೈಯಪ್ಪನಹಳ್ಳಿ ಪ್ರಕರಣದಲ್ಲಿ ಇಬ್ಬರಿಗೆ ಬೇಲ್ ಸಿಕ್ಕಿದೆ. ಇದಕ್ಕೆ ಕಾನೂನಿನ‌ ಕೆಲವು ತೊಡಕು ಕಾರಣ ಎಂದರು.

ರಾಜ್ಯ ಮಟ್ಟದಲ್ಲಿ ಭ್ರೂಣ ಹತ್ಯೆ ತಡೆಗೆ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೂ ಟಾಸ್ಕ್ ಪೋರ್ಸ್ ಮಾಡುವ ಬಗ್ಗೆ ಚರ್ಚಿಸಲಾಗುತ್ತದೆ. ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ಇರುತ್ತೆ, ಆದರೆ ಅಕ್ರಮ ವಿರುದ್ಧ ಕಾರ್ಯಚರಣೆ ಕಷ್ಟ. ಪೊಲೀಸ್‌ ಇಲಾಖೆಯ ಜತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮಟ್ಟದ ಟಾಸ್ಕ್ ಫೋರ್ಸ್ ಯಾವ ರೀತಿ ಇರಬೇಕು. ಯಾರು ಯಾರು ಇರಬೇಕು ಅಂತ ಮುಂದಿನ ವಾರ ನಿರ್ಧಾರ ಮಾಡಲಾಗುತ್ತದೆ. ಭ್ರೂಣ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಕಾನೂನಿನಲ್ಲಿ ಕೆಲವು ತೊಡಕುಗಳಿವೆ. ಹೀಗಾಗಿ ಅವುಗಳನ್ನು ಸರಿ ಪಡಿಸುವ ಬಗ್ಗೆ ಒಂದು ಸಮಿತಿ ಮಾಡಲಾಗುತ್ತದೆ. ಕಾಯ್ದೆ ತಿದ್ದುಪಡಿಗೆ ಅಧಿವೇಶನದವರೆಗೂ ಕಾಯಲು ಆಗಲ್ಲ. ಸಮಿತಿ ರಚನೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ | Foeticide Case : 900 ಭ್ರೂಣಹತ್ಯೆ ನಡೆದ ಆಲೆಮನೆ ಇನ್ನೂ Working!: ಆರ್‌ ಅಶೋಕ್‌ ಭೇಟಿ ವೇಳೆ ಬಯಲು

ಭ್ರೂಣ ಹತ್ಯೆ ಹಾಗೂ ಪತ್ತೆ ಬಗ್ಗೆ ಸುಳಿವು ನೀಡಿದರಿಗೆ ಬಹುಮಾನ ಹೆಚ್ಚಳ ಸುಳಿವು ನೀಡಿದವರಿಗೆ ಆರೊಗ್ಯ ಇಲಾಖೆಯಿಂದ ಒಂದು ಲಕ್ಷ ರೂಪಾಯಿ ನಗದು ಬಹುಮಾನ. ಮುಂದಿನ ವಾರ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಹೇಳಿದರು.

Exit mobile version