Site icon Vistara News

Amit shah | ಮಂಡ್ಯ ಅರ್ಥ ಮಾಡಿಕೊಂಡರೆ ಇಡೀ ಇಂಡಿಯಾವನ್ನೇ ಅರ್ಥ ಮಾಡಿಕೊಂಡಂತೆ: ನಿರ್ಮಲಾನಂದನಾಥ ಶ್ರೀ

nirmalanandanatha seer ಮೆಗಾ ಡೈರಿ

ಮಂಡ್ಯ: ಮಂಡ್ಯವನ್ನು ಅರ್ಥ ಮಾಡಿಕೊಂಡರೆ ಇಡೀ ಇಂಡಿಯಾವನ್ನೇ ಅರ್ಥ ಮಾಡಿಕೊಂಡ ಹಾಗೆ. ಭಾರತದ ಶಕ್ತಿ ರೈತರಾಗಿದ್ದಾರೆ. ಭಾರತದಲ್ಲಿ ಶೇ. 65 ರಷ್ಟು ಮಂದಿ ವ್ಯವಸಾಯ ಮಾಡುತ್ತಿದ್ದಾರೆ. ರೈತರ ಬದುಕು ಹಸನಾಗಲು ಸರ್ಕಾರಗಳು ಶ್ರಮಿಸುತ್ತಿವೆ. ನಮ್ಮ ಜಿಡಿಪಿಗೆ ಶೇ. 20ರಷ್ಟು ಕೊಡುಗೆ ಕೃಷಿಯಿಂದಲೇ ಸಿಗುತ್ತಿದೆ. ಸರ್ಕಾರ ರೈತರಿಗೆ ಅನುಕೂಲ ಆಗುವ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆದಿಚಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಹೇಳಿದರು.

ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ (Mega Diary) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಹಕಾರ ಇಲಾಖೆ ಕೂಡಾ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಎಲ್ಲ ಜಿಲ್ಲೆಗಳಿಗಿಂತ ಮಂಡ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಆಗುತ್ತಿದೆ. ಬಹಳ ದಿನಗಳಿಂದ ರೈತರಿಗೆ ಮೈಶುಗರ್ ಆರಂಭದ ಬೇಡಿಕೆ ಇತ್ತು. ಸರ್ಕಾರ ಮೈಶುಗರ್ ಆರಂಭಿಸಿದೆ. ಕಬ್ಬಿನ ಬೆಲೆಗೆ ಬೆಂಬಲ ಬೆಲೆಗೂ ಒತ್ತಡ ಇದೆ. ಕಳೆದ ವಾರವಷ್ಟೇ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು.

ಸಹಕಾರ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಸಹಕಾರಿ ಬ್ಯಾಂಕ್‌ಗಳ ವಂಚನೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಸಹಕಾರಿ ಇಲಾಖೆಯ ನ್ಯೂನತೆಗಳನ್ನು ಸರಿಪಡಿಸಬೇಕು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾಗಿರುವ ಅಮಿತ್‌ ಶಾ (Amit shah) ಅವರು ಗಮನಹರಿಸಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಸಲಹೆ ನೀಡಿದರು.

ಇದನ್ನೂ ಓದಿ | Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ

Exit mobile version