Site icon Vistara News

IKEA in Bengaluru | ʼಐಕಿಯʼ ಮಳಿಗೆಗೆ ತೆರಳುವ ಗ್ರಾಹಕರಿಗೆ ಪೊಲೀಸರ ಸೂಚನೆ ಏನು?

IKEA in Bangalore

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ನಿಲ್ದಾಣ ಸಮೀಪದಲ್ಲಿ ಹೊಸದಾಗಿ ಆರಂಭವಾದ ಐಕಿಯ ಮಳಿಗೆಗೆ (IKEA in Bangalore) ಈ ವಾರಾಂತ್ಯದಲ್ಲಿಯೂ ಸಾವಿರಾರು ಜನರು ಭೇಟಿ ನೀಡುವ ಅಂದಾಜಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಇರುವ ಐಕಿಯ ಮಳಿಗೆಗೆ ಕಳೆದ ಭಾನುವಾರ (ಜೂನ್‌ 25) ಜನರ ಪ್ರವಾಹವೇ ಹರಿದುಬಂದಿತ್ತು. ಸುಮಾರು ಮೂರು ಗಂಟೆಗಳ ಕಾಲ ಜನರು ಮೆಟ್ರೋ ಸ್ಟೇಷನ್‌ನಲ್ಲಿ ಕಾಯುವಂತಾಗಿತ್ತು. ಜತೆಗೆ ರಸ್ತೆಯಲ್ಲೆ ಗ್ರಾಹಕರ ಕ್ಯೂನಿಂದಾಗಿ ಹಾಗೂ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಐಕಿಯ ಮಳಿಗೆಗೆ ಬರುವರಲ್ಲಿ ಸಂಚಾರ ಪೊಲೀಸರು ವಿಶೇಷ ಮನವಿ ಮಾಡಿದ್ದಾರೆ ಹಾಗೂ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ | IKEA in Bangalore | ಬೆಂಗಳೂರಿನ ಐಕಿಯ ಮಳಿಗೆಗೆ ಮೊದಲ ದಿನವೇ ಹರಿದು ಬಂದ ಜನಸಾಗರ

ಈ ಮಳಿಗೆಯಲ್ಲಿ ಯಾವುದೇ ಸಿನಿಮಾ ಹಾಲ್ ಅಥವಾ ಇತರೆ ಬೇರೆ ಯಾವುದೇ ಶಾಪಿಂಗ್‌ ಇರುವುದಿಲ್ಲ. ಕೇವಲ ಗೃಹೋಪಯೋಗಿ ವಸ್ತುಗಳು ಮಾತ್ರ ಇರುತ್ತವೆ. ಸಾರ್ವಜನಿಕರು ಇದನ್ನು ಮನಗೊಂಡು ಕೇವಲ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮಾತ್ರ IKEA ಮಾಲ್‌ಗೆ ಬರಬೇಕು. ಸಾರ್ವಜನಿಕರು ಸಾಧ್ಯವಾದಷ್ಟು ಮೆಟ್ರೋ ರೈಲನ್ನು ಉಪಯೋಗಿಸಬೇಕು ಎಂದು ಪೀಣ್ಯ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಒಂದೆಡೆ ಮೇಲ್ಸೇತುವೆ ಕಾಮಗಾರಿ ಕಾರ್ಯ ನಡೆಯುತ್ತಿದ್ದರೂ, ಅದು ಪೂರ್ಣಗೊಳ್ಳುವುದಕ್ಕೂ ಮುನ್ನ ಐಕಿಯ ಮಳಿಗೆಗೆ ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರು ಆಕ್ಷೇಪಿಸಿದ್ದರು. ಹೆಚ್ಚು ಜನರು ಆಗಮಿಸುವುದರಿಂದ ಈ ಭಾಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಗೀಡಾಗಿತ್ತು. ಈ ಹಿಂದೆ ಅನೇಕರು ಮಳಿಗೆಗೆ ಪ್ರವೇಶ ದೊರಕದೆಯೇ ನಿರಾಸೆಗೊಂಡು ಮನಗೆ ವಾಪಸ್ಸಾಗಬೇಕಾದ ಸನ್ನಿವೇಶ ಕೂಡ ಎದುರಾಗಿತ್ತು.

ಪೊಲೀಸರ ವಿಶೇಷ ಸೂಚನೆಗಳು ಏನೇನು?

೧. ಐಕಿಯ ಮಳಿಗೆ (IKEA) ಒಳಗೆ 1,400 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

೨. ಹೆಚ್ಚಿನ ವಾಹನಗಳಿಗೆ ಪಾರ್ಕಿಂಗ್ ಸಲುವಾಗಿ ಮಾದಾವರ ಬಳಿ BIEC ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

೩. ಪಾರ್ಕಿಂಗ್‌ ಸ್ಥಳದಿಂದ ಐಕಿಯ ಮಾಲ್‌ಗೆ ಸಂಚರಿಸಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

೪. ತುಮಕೂರು ಮುಖ್ಯ ರಸ್ತೆಯಲ್ಲಿ ಹಾಗೂ ಜಿಂದಾಲ್ ಅಂಡರ್ ಪಾಸ್ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ.

https://twitter.com/srinivasforyou/status/1540617546855874560?s=20&t=tod_7uRDGxW1MbUb-XoXZw

ಐಕಿಯ ಮಳಿಗೆ ಸುಮಾರು 12 ಎಕರೆಯಷ್ಟು ಜಾಗದಲ್ಲಿದೆ. ಮಳಿಗೆಯಲ್ಲಿ 7,000ಕ್ಕೂ ಅಧಿಕ ಪೀಠೋಪಕರಣಗಳು ಲಭ್ಯವಿದ್ದು, 65ಕ್ಕೂ ಅಧಿಕ ರೂಮ್‌ ಡೆಕೊರ್‌ಗಳು ಇಲ್ಲಿವೆ.

ಇದನ್ನೂ ಓದಿ | IKEA STORE: ಪೀಠೋಪಕರಣಗಳ ರಿಟೇಲರ್‌ ಐಕಿಯ ಇಂಡಿಯಾದಿಂದ ಬೆಂಗಳೂರಿನಲ್ಲಿ 3ನೇ ಮಳಿಗೆ ಆರಂಭ

Exit mobile version