ಕೊಪ್ಪಳ: ಇಲ್ಲಿನ ನರೆಗಲ್ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆಯನ್ನು (Illegal mining) ಪ್ರಶ್ನಿಸಿದ್ದಕ್ಕೆ ಗುಂಪೊಂದು ವ್ಯಕ್ತಿಗೆ ಥಳಿಸಿರುವ ಘಟನೆ ನಡೆದಿದೆ. ಪೊಲೀಸರ ಸಮ್ಮುಖದಲ್ಲಿಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹುಲಗಪ್ಪ ಮೀಸೆ ಎಂಬುವವರು ಹಲ್ಲೆಗೊಳಾದವರಾಗಿದ್ದಾರೆ.
ಹುಲಗಪ್ಪ ಅವರು ಹಿರೇಹಳ್ಳದಲ್ಲಿ ಮರಳು ತುಂಬುತ್ತಿದ್ದ ವಾಹನ ತಡೆಯಲು ಮುಂದಾಗಿದ್ದಾರೆ. ಈ ವೇಳೆ ಯಮನೂರಪ್ಪ ಎಂಬಾತ ಸೇರಿ 11 ಜನರ ಗುಂಪು ಮುಗಿಬಿದ್ದು ಹಲ್ಲೆ ನಡೆಸಿದೆ. ಈ ದೃಶ್ಯಾವಳಿಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬಳಿಕ ತಮ್ಮ ಮನೆಗೂ ನುಗ್ಗಿರುವ ಈ ಗುಂಪು ಗಲಾಟೆ ಮಾಡಿದ್ದಲ್ಲದೆ, ನನ್ನ ಪತ್ನಿಗೂ ಥಳಿಸಿದ್ದಾರೆ ಎಂದು ಹುಲಗಪ್ಪ ಆರೋಪಿಸಿದ್ದಾರೆ. ಸದ್ಯ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಎರಡೂ ಕಡೆಯವರಿಂದಲೂ ದೂರು ದಾಖಲಾಗಿದೆ.
ಇದನ್ನೂ ಓದಿ | Viral Video| ಮೊಸಳೆ ಪಕ್ಕ, ಮೊಸಳೆಯಂತೆಯೇ ಹೋಗಿ ಮಲಗಿ ಅದರ ಕಾಲು ಎಳೆದು ಕೀಟಲೆ ಕೊಟ್ಟವನಿಗೆ ನೆಟ್ಟಿಗರಿಂದ ಬುದ್ಧಿವಾದ!