ಶಿವಮೊಗ್ಗ: ಇಲ್ಲಿನ ಸೊರಬ ಪಟ್ಟಣದಲ್ಲಿ ಹಳೇ ನಾಟ ಅಕ್ರಮ ಸಾಗಾಟಕ್ಕೆ ಸಿದ್ಧವಾಗಿದ್ದ ವೇಳೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆದರೆ, ಅರಣ್ಯಾಧಿಕಾರಿಗಳೇ ಅಕ್ರಮ ನಾಟ ಸಾಗಾಟ ನಡೆಸುತ್ತಿರುವುದು ತಿಳಿದು ಬಂದಿದೆ.
ಎ.ಸಿ.ಎಫ್ ಪ್ರವೀಣ್ ಕುಮಾರ್ ಬಸ್ರೂರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮ ನಾಟ ಸಾಗಾಟದ ವೇಳೆ ಸ್ಕ್ಯಾಂಡಲ್ ಪತ್ತೆ ಹಚ್ಚಿದ್ದಾರೆ. ಸೊರಬ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ನಾಟ ಇದ್ದು, ಖಚಿತ ಮಾಹಿತಿ ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ: Karnataka Budget 2023 : ನೇಕಾರರಿಗೆ ಭರ್ಜರಿ ಕೊಡುಗೆ; ನೇಕಾರ ಸಮ್ಮಾನ್ 3ರಿಂದ 5 ಸಾವಿರಕ್ಕೆ ಏರಿಕೆ, ಉಚಿತ ವಿದ್ಯುತ್
ಸಾಗಾಟಕ್ಕೆ ಸಿದ್ಧವಾಗಿದ್ದ ಹಳೇ ನಾಟ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 2-3 ದಿನಗಳಿಂದ 3-4 ಲೋಡ್ ನಾಟ ಸಾಗಾಟದ ಆರೋಪ ಕೇಳಿ ಬಂದಿದೆ. ಸ್ಥಳೀಯ ಅರಣ್ಯಾಧಿಕಾರಿ ಸಾಥ್ ನೀಡಿದ್ದು, ಅಕ್ರಮ ನಾಟ ಸಾಗಾಟ ಮಾಡಲಾಗಿದೆ ಎನ್ನಲಾಗಿದೆ. ಯಾರ ಒತ್ತಡಕ್ಕೂ ಮಣಿಯದೇ ಕಾರ್ಯಾಚರಣೆ ನಡೆಸಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.