Site icon Vistara News

Illicit liquor: ಅಕ್ರಮ ಮದ್ಯ ಮಾರಾಟ ಮಾಡಲು ಬಂದವನಿಗೆ ಮಹಿಳೆಯರಿಂದ ಪೊರಕೆ ಸೇವೆ

Illicit liquor ripponpet

#image_title

ರಿಪ್ಪನ್‌ ಪೇಟೆ: ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಅಕ್ರಮ ಮದ್ಯ (Illicit liquor) ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ಮಾಡಲಾಗಿದೆ.

ಬಸವಾಪುರ ಗ್ರಾಮದ ಅಕ್ರಮ ಮದ್ಯ ಮಾರಾಟಗಾರ ನಂದ್ಯಪ್ಪ ಡಿ.ಪಿ ಎಂಬುವವನಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ ವಿಡಿಯೊ ವೈರಲ್ ಆಗಿದ್ದು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಬುಧವಾರ (ಮಾ.8) ಮಹಿಳೆಯರು ತಮ್ಮ ನಾರಿಶಕ್ತಿ ಪ್ರದರ್ಶನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಮ್ಮ ಗಂಡಂದಿರ ಕಾಟ ತಾಳಲಾರದೆ ಅಕ್ರಮ ಮದ್ಯ ಮಾರಾಟಗಾರನಿಗೆ ಬೆಳ್ಳಂಬೆಳಗ್ಗೆ ಪೊರಕೆ ಸೇವೆ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ರೈಡ್‌ಗೆ ಬಂದ ಹಾಗೆ ಮಾಡಿ ಅಂಗಡಿಯವರ ಬಳಿ ಲಂಚ ಪಡೆದು ಹೋಗುತ್ತಿದ್ದರು ಎಂದು ಮಹಿಳೆಯರು ಆರೋಪಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಮದ್ಯ ಮಾರಾಟಗಾರನಿಗೆ ಪೊರಕೆ ಸೇವೆ ಮಾಡಿದ್ದಾರೆ. ಮುಂದೊಂದು ದಿನ ಅಬಕಾರಿ ಅಧಿಕಾರಿಗಳಿಗೂ ಇದೇ ಗತಿಯಾಗುವುದೆಂದು ಬಸವಾಪುರ ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Nepal Presidential polls: ನೇಪಾಳ ಅಧ್ಯಕ್ಷ ಎಲೆಕ್ಷನ್ ಶುರು, ಇಂದು ಸಂಜೆ ರಿಸಲ್ಟ್

Exit mobile version