Site icon Vistara News

Illicit liquor: ಅಕ್ರಮ ಮದ್ಯ ಮಾರಾಟ; ಮಾಲು ಸಮೇತ ಆರೋಪಿಯ ಬಂಧನ

Illicit liquor ripponpet

#image_title

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿ ಕೊಪ್ಪ ಗ್ರಾಮದಲ್ಲಿ ಅಕ್ರಮ ಮದ್ಯ (Illicit liquor) ಮಾರಾಟ ಮಾಡುತಿದ್ದ ಅಂಗಡಿಯ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ತಮ್ಮಡಿಕೊಪ್ಪ ಗ್ರಾಮದ ಅಂಗಡಿಯೊಂದರ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ (ಮಾ.15) ದಾಳಿ ನಡೆಸಿ ಮಂಜಪ್ಪ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ರಿಪ್ಪನ್‌ಪೇಟೆ ಪಿಎಸ್ಐ ಶಿವಾನಂದ ಕೆ. ನೇತೃತ್ವದಲ್ಲಿ ಸಿಬ್ಬಂದಿ ಉಮೇಶ, ಶಿವಕುಮಾರ್ ನಾಯ್ಕ್ ಮತ್ತು ಮಧುಸೂಧನ್ ಭಾಗಿಯಾಗಿದ್ದರು.

ಇದನ್ನೂ ಓದಿ: Hoysala Movie: ಡಾಲಿ ಧನಂಜಯ್‌ ಅಭಿನಯದ ʻಹೊಯ್ಸಳʼ ಸಿನಿಮಾದ ಟ್ರೈಲರ್‌ ದಿನಾಂಕ ಪ್ರಕಟ

Exit mobile version