Site icon Vistara News

Illicit relationship | ಅಕ್ರಮ ಸಂಬಂಧ ಮುಂದುವರಿಸಲು ಒಲ್ಲೆ ಎಂದವಳಿಗೆ ಚಾಕು ಇರಿದ

ಬೆಂಗಳೂರು: ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ‌ ಅಕ್ರಮ ಸಂಬಂಧ (Illicit relationship) ಮುಂದುವರಿಸುವುದು ಬೇಡ ಎಂದಿದ್ದ ವಿವಾಹಿತ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ. ಹಬೀಬಾ ತಾಜ್ (30) ಚಾಕು ಇರಿತಕ್ಕೆ ಒಳಗಾದ ಮಹಿಳೆ.

ಹಬೀಬಾ ತಾಜ್‌ಳ ಪತಿ ತೀರಿಕೊಂಡಿದ್ದು, ಇಬ್ಬರು ಮಕ್ಕಳ ಜತೆಗೆ ವಾಸಮಾಡಿಕೊಂಡಿದ್ದರು. ಈ ವೇಳೆ ಆಟೋ ಚಾಲಕ ಶೇಕ್ ಮೆಹಬೂಬ್ (32) ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದಳು. ಶೇಕ್ ಮೆಹಬೂಬ್‌ಗೂ ಮದುವೆಯಾಗಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿದ್ದ.

ಇತ್ತೀಚೆಗೆ ಹಬೀಬಾ ತಾಜ್‌ ಶೇಕ್ ಮೆಹಬೂಬ್‌ನಿಂದ ದೂರಾಗಿ, ಬೇರೆ ಮದುವೆ ಆಗಲು ತಯಾರಾಗಿದ್ದಳಂತೆ. ಆದರೆ, ಇದು ಶೇಕ್ ಮೆಹಬೂಬ್‌ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಭಾನುವಾರ ರಾತ್ರಿ‌ ಸುಮಾರು 12 ಗಂಟೆಗೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದ್ದು, ಕೋಪಗೊಂಡ ಶೇಕ್ ಮೆಹಬೂಬ್ ಚಾಕು ಇರಿದಿದ್ದಾನೆ.

ಚಾಕು ಇರಿತದಿಂದ ತೀವ್ರ ಅಸ್ವಸ್ಥಳಾಗಿರುವ ಹಬೀಬಾ ತಾಜ್‌ಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಕು ಇರಿತ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | Thife Case | ಕೋಟಿ ಕೋಟಿ ಲೂಟಿ ಮಾಡಲು ಬಂದವರು ಈಗ ಜೈಲುಪಾಲು

Exit mobile version