Site icon Vistara News

Illicit relationship: ಪಕ್ಕದ ಮನೆಯ ಗಂಡ, ಎದುರು ಮನೆಯವನ ಹೆಂಡತಿ ಜತೆ ಸ್ಯಾಂಟ್ರೋ ಕಾರಲ್ಲಿ ಪರಾರಿ!

Illicit relationship

ಬೆಂಗಳೂರು: ಮಗಳನ್ನು ಶಾಲೆಗೆ ಬಿಟ್ಟು ಬರುತ್ತೀನಿ ಎಂದವಳು ಪಕ್ಕದ ಮನೆಯ ಪರಪುರುಷನೊಂದಿಗೆ ಪರಾರಿ ಆಗಿರುವ ಪ್ರಕರಣವೊಂದು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ (Illicit relationship) ದಾಖಲಾಗಿದೆ. ಆ ಇಬ್ಬರೂ ಜೋಡಿಗೂ ಮದುವೆ ಆಗಿ ಮಕ್ಕಳಿದ್ದರೂ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಆಕೆ ತನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು, ಈತ ಹೆಂಡತಿ ಮಕ್ಕಳನ್ನು ಬಿಟ್ಟು ಸ್ಯಾಂಟ್ರೋ ಕಾರ್‌ನಲ್ಲಿ ಪರಾರಿ ಆಗಿದ್ದಾರೆ. ಈಗ ಪರಾರಿ ಆಗಿರುವ ಮಹಿಳೆಯ ಅಸಲಿ ಪತಿ, ಪತ್ನಿ ಠಾಣೆ ಮೆಟ್ಟಿಲೇರಿದ್ದು ಹುಡುಕಿಕೊಡುವಂತೆ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.

ನವೀದ್ ಹಾಗು ಶಾಜಿಯಾ ಎಂಬುವವರು ಪರಾರಿಯಾದ ಜೋಡಿಗಳು. ಈ ನವೀದ್‌ ಜೀನತ್ ಎಂಬುವವರೊಂದಿಗೆ ವಿವಾಹವಾಗಿ 12 ವರ್ಷ ಕಳೆದಿದ್ದು, ಇಬ್ಬರು ಮಕ್ಕಳಿದ್ದಾರೆ. ಹಾಗೆ ಶಾಜಿಯಾ ಕೂಡ ಮುಬಾರಕ್ ಎಂಬಾತನೊಂದಿಗೆ ಮದುವೆ ಆಗಿ 8 ವರ್ಷ ಕಳೆದಿದ್ದು, ಈ ದಂಪತಿಗೂ ಇಬ್ಬರು ಮಕ್ಕಳಿದ್ದಾರೆ.

ಅಕ್ಕ-ಪಕ್ಕ ಮನೆಯಲ್ಲಿರುವ ಎರಡೂ ಕುಟುಂಬದವರ ನಡುವೆ ಒಳ್ಳೆಯ ಸ್ನೇಹ ಸಂಬಂಧವಿತ್ತು. ಒಬ್ಬರು ಇನ್ನೊಬ್ಬರ ಕುಟುಂಬಕ್ಕೆ ಹೋಗಿ ಬರುವುದು ಇತ್ತು. ಆದರೆ, ಈ ಮಧ್ಯೆ ಈ ನವೀದ್‌ ಹಾಗೂ ಶಾಜಿಯಾ ನಡುವೆ ಪ್ರೇಮ ಹುಟ್ಟಿ ಅಕ್ರಮ ಸಂಬಂಧವನ್ನು ಹೊಂದಿದ್ದರು. ಯಾರಿಗೂ ತಿಳಿಯದಂತೆ ತಮ್ಮ ಪ್ರಣಯವನ್ನು ಮುಂದುವರಿಸಿದ್ದರು. ಈ ಯಾವ ವಿಚಾರವೂ ಮನೆಯವರಿಗೂ ಕೂಡ ತಿಳಿದಿರಲಿಲ್ಲ.

ಪ್ರಣಯ ಪಕ್ಷಿಗಳಿಗೆ ಹೆಚ್ಚು ಕಾಲ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ ಎಂದು ಕೊನೆಗೂ ಅರ್ಥವಾಯಿತು. ಇದಕ್ಕಾಗಿ ಮಾಸ್ಟರ್‌ ಪ್ಲ್ಯಾನ್ ಮಾಡಿತು ಜೋಡಿ. ಕಳೆದ ಡಿಸೆಂಬರ್‌ನಲ್ಲಿ ಮಗಳನ್ನು ಶಾಲೆಗೆ ಬಿಟ್ಟು ಬರುತ್ತೇನೆ ಎಂದು ನೆಪ ಹೇಳಿ ಶಾಜಿಯಾ ಮನೆ ಬಿಟ್ಟು ಹೋಗಿದ್ದರೆ, ಇತ್ತ ಕೆಲಸಕ್ಕೆ ಹೋಗುವುದಾಗಿ ಹೇಳಿ ಸ್ಯಾಂಟ್ರೋ ಕಾರಿನಲ್ಲಿ ನವೀದ್‌ ಪರಾರಿಯಾಗಿದ್ದಾನೆ.

ನಾಪತ್ತೆ ದೂರು ದಾಖಲು
ಎರಡು ಕುಟುಂಬದವರು ಪತಿ-ಪತ್ನಿ ಕಾಣೆಯಾದ ಬಗ್ಗೆ ನಾಪತ್ತೆ ದೂರು ದಾಖಲಿಸಿದ್ದಾರೆ. ಆದರೆ ಜ್ಞಾನಭಾರತಿ ಪೊಲೀಸರು ಇದುವರೆಗೂ ನಮ್ಮವರನ್ನು ಹುಡುಕಿಕೊಟ್ಟಿಲ್ಲ ಎಂದು ದೂರಿದ್ದಾರೆ. ಒಂದು ತಿಂಗಳಾದರೂ ಅವರ ಸುಳಿವು ಇಲ್ಲ. ಆದಷ್ಟು ಬೇಗ ಪತ್ತೆ ಮಾಡಿ ಎಂದರೂ ಜ್ಞಾನಭಾರತಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಪಶ್ಚಿಮ ವಿಭಾಗ ಡಿಸಿಪಿ ಮೊರೆ ಹೋಗಿದ್ದಾರೆ.

ಇದನ್ನೂ ಓದಿ | Robbery Case: ಅತಿಯಾಸೆ ಗತಿಗೇಡು; ದರೋಡೆ ಕಥೆ ಕಟ್ಟಿದವನೇ ಈಗ ಖಾಕಿ ಖೆಡ್ಡಾಕ್ಕೆ ಬಿದ್ದ!

Exit mobile version