Site icon Vistara News

ಬೆಂಗಳೂರಿನ ರಿಯಲ್ ಎಸ್ಟೇಟ್​ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ; ಹಣ, ಚಿನ್ನ ಜಪ್ತಿ

note

ಬೆಂಗಳೂರು: ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ಸೋಮವಾರ (ಜು.11) ಬೆಂಗಳೂರು ಹಾಗೂ ಹೈದರಾಬಾದ್​ನ ಎರಡು ಪ್ರಮುಖ ರಿಯಲ್​ ಎಸ್ಟೇಟ್​ ಕಂಪನಿಗಳ ಮೇಲೆ ದಾಳಿ ನಡೆಸಿದೆ. ಹಲವು ದಾಖಲೆ, ನಗದು, ಚಿನ್ನಾಭರಣವನ್ನು ಜಪ್ತಿ ಮಾಡಿದೆ. ಒಂದೇ ದಿನ ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈನಲ್ಲಿರುವ 40ಕ್ಕೂ ಹೆಚ್ಚು ಕಡೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ “”ಮಂಗಳವಾರ ಬೆಳಗ್ಗೆವರೆಗೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟಾರೆ ದಾಳಿಯಲ್ಲಿ 3.50 ಕೋಟಿ ರೂ. ಹಾಗೂ 18.50 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೀಜ್​ ಮಾಡಲಾಗಿದೆ. ಇವರು ಇಷ್ಟು ಹಣವನ್ನು ಹೇಗೆ ಸಂಪಾದಿಸಿದರು ಎಂಬುದನ್ನು ತಿಳಿಸಿಲ್ಲ. ವಾಣಿಜ್ಯ ಮತ್ತು ವಸತಿ ಜಾಗದ ನಿರ್ಮಾಣ, ಮಾರಾಟ, ಗುತ್ತಿಗೆ ವ್ಯವಹಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ವಹಿವಾಟಿನಿಂದ ಇಷ್ಟು ಹಣ ಬಂದಿರಬಹುದು ಎಂದು ಹಣಕಾಸು ಸಚಿವಾಲಯ ಅಂದಾಜಿಸಿದೆ.

ಇದನ್ನು ಓದಿ| Zameer ACB Raid | ಹೈಕೋರ್ಟ್‌ ತೀವ್ರ ತರಾಟೆಯ ಬೆನ್ನಲ್ಲೇ ಎಚ್ಚೆತ್ತ ಎಸಿಬಿಯಿಂದ ತಿಮಿಂಗಿಲಗಳ ಬೇಟೆ

ನಗದು ಚಿನ್ನಾಭರಣದ ಜೊತೆಗೆ ಹಲವು ಮಹತ್ವದ ದಾಖಲೆ ಮತ್ತು ಡಿಜಿಟಲ್ ಸಾಧನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳು ದೋಷಾರೂಪಣೆಗೆ ಸಾಕ್ಷ್ಯವನ್ನು ಒಳಗೊಂಡಿರುತ್ತದೆ ಎಂದು ಸಚಿವಾಲಯ ತಿಳಿಸಿದೆ. ವಶಪಡಿಸಿಕೊಂಡ ವಸ್ತುಗಳ ಪ್ರಾಥಮಿಕ ತನಿಖೆಯಲ್ಲಿ ಭೂ ಮಾಲೀಕರು ಜೆಡಿಎ ಅಥವಾ ಬೆಂಗಳೂರು ಮೂಲದ ಡೆವಲಪರ್​ನೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿರುವುದು ಬಹಿರಂಗಗೊಂಡಿದೆ.

ಯೋಜನೆಗಳಿಗೆ ಪೂರಕವಾದ ಪ್ರಮಾಣ ಪತ್ರಗಳನ್ನು ಪಡೆಯಲಾಗಿದ್ದರೂ ವಹಿವಾಟಿನಿಂದ ಬರುವ ಬಂಡವಾಳದ ಲಾಭವನ್ನು ಸರಿಯಾಗಿ ತೋರಿಸಿಲ್ಲ. ಈ ರೀತಿ ಬಹಿರಂಗಪಡಿಸದ ಬಂಡವಾಳದ ಲಾಭದ ಮೊತ್ತ ಸುಮಾರು 400 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಮೂಲಕ ತೆರಿಗೆ ವಂಚನೆ ಮಾಡಿರುವ ಆರೋಪವಿರುವುದರಿಂದ ಈ ಎರಡು ರಿಯಲ್ ಎಸ್ಟೇಟ್​ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.  

ಇದನ್ನು ಓದಿ| Zameer ACB Raid | ಜಮೀರ್‌ ಮನೆ ಮುಂದೆ ಕಾರ್ಯಕರ್ತರ ಪ್ರತಿಭಟನೆ: ಅಕ್ಕಸಾಲಿಗರನ್ನು ಮನೆಗೆ ಕರೆಸಿಕೊಂಡ ಎಸಿಬಿ

Exit mobile version