ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ನವೆಂಬರ್ 12) ನಡೆಯಲಿದೆ. ಭಾರತ ಹಾಗೂ ನೆದರ್ಲೆಂಡ್ಸ್ (IND vs NED) ತಂಡಗಳು ಪಂದ್ಯಕ್ಕಾಗಿ (ICC World Cup 2023) ಸಕಲ ರೀತಿಯಲ್ಲಿ ಸಜ್ಜಾಗಿವೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ 7ರಿಂದ 11 ಗಂಟೆವರೆಗೆ ವಾಹನಗಳ ಪಾರ್ಕಿಂಗ್ (Vehicles Parking) ನಿಷೇಧಿಸಲಾಗಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರ್ ಬಾ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲೆ ರಸ್ರೆ, ವಿಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಗಳಲ್ಲಿ ನಿಲುಗಡೆಯನ್ನು ನಿಷೇಧಿಲಾಗಿದೆ. ಕಿಂಗ್ಸ್ ರಸ್ತೆ, ಯು.ಬಿ. ಸಿಟಿ ಪಾರ್ಕಿಂಗ್ ಸ್ಥಳ, ಶಿವಾಜಿ ನಗರ ಬಿಎಂಟಿಸಿ ಬಸ್ ನಿಲ್ದಾಣ ಮೊದಲ ಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.
ಏಕ ದಿನ ವಿಶ್ವ ಕಪ್ನ ಪಂದ್ಯಾವಳಿಯ ಗುಂಪು ಹಂತದ ಕೊನೆಯ ಮುಖಾಮುಖಿಯಾಗಿದ್ದು, ಭಾರತ ತಂಡವು ತಮ್ಮ ಗೆಲುವಿನ ಓಟವನ್ನು ಜೀವಂತವಾಗಿಡಲು ಯತ್ನಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಬಲ ಗೆಲುವಿನ ಹುಮ್ಮಸ್ಸಿನಲ್ಲಿ ಮೆನ್ ಇನ್ ಬ್ಲೂ ಕಣಕ್ಕೆ ಇಳಿಯಲಿದೆ. ಮೊದಲು ಬ್ಯಾಟ್ ಮಾಡಿ 326 ರನ್ ಗಳಿಸಿದ್ದ ಆತಿಥೇಯರು ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್ ಗಳಿಗೆ ಆಲೌಟ್ ಮಾಡಿ 243 ರನ್ ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದ್ದರು. ಇದೀಗ ಅದೇ ಆವೇಗದಲ್ಲಿ ದುರ್ಬಲ ಡಚ್ಚರ ಪಡೆಯನ್ನು ಎದುರಿಸಲಿದ್ದು ಮತ್ತೊಂದು ದೊಡ್ಡ ಅಂತರದ ವಿಜಯವನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Virat Kohli : ಲೀಗ್ ಹಂತದ ಕೊನೇ ಪಂದ್ಯದಲ್ಲಿ ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ?
ಭಾರತ- ನೆದರ್ಲ್ಯಾಂಡ್ಸ್ ಮುಖಾಮುಖಿ ದಾಖಲೆಗಳು
- ಆಡಿದ ಪಂದ್ಯಗಳು 2
- ಭಾರತ 2
- ನೆದರ್ಲ್ಯಾಂಡ್ಸ್ 0
- ಮೊದಲ ಪಂದ್ಯ ಫೆಬ್ರವರಿ 12, 2003
- ಕೊನೆಯ ಬಾರಿ ಆಡಿದ್ದು ಮಾರ್ಚ್ 9, 2011
ನೇರ ಪ್ರಸಾರ ವಿವರಗಳು
- ದಿನಾಂಕ ಭಾನುವಾರ, ನವೆಂಬರ್ 12
- ಸಮಯ: ಮಧ್ಯಾಹ್ನ 02:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
- ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್