Site icon Vistara News

Indecent behaviour : ಭಟ್ಕಳದಲ್ಲಿ ಮುಸ್ಲಿಂ ಮಹಿಳೆಯರ ಜತೆ ಅಸಭ್ಯ ವರ್ತನೆ; ಇಬ್ಬರು ಹಿಂದು ಯುವಕರ ಸಹಿತ ಏಳು ಮಂದಿ ವಶಕ್ಕೆ

Bhatkal indecent behaviour

#image_title

ಕಾರವಾರ: ಭಟ್ಕಳದ ರಂಜಾನ್‌ ಮಾರ್ಕೆಟ್‌ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ (Indecent behaviour) ಆರೋಪದಲ್ಲಿ ಪೊಲೀಸರು ಇಬ್ಬರು ಹಿಂದೂ ಯುವಕರು ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದ ಮಾರುಕಟ್ಟೆಯಲ್ಲಿ ರಂಜಾನ್‌ ಖರೀದಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಜನಸಂದಣಿ ಇತ್ತು. ಇದನ್ನು ದುರುಪಯೋಗಪಡಿಸಿಕೊಂಡ ಯುವಕರು ಮುಸ್ಲಿಂ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದರು. ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದವರು.

ಹಿಂದು ಯುವಕರು ಈ ರೀತಿ ವರ್ತಿಸುತ್ತಿರುವುದನ್ನು ಗಮನಿಸಿದ ಮುಸ್ಲಿಂ ಯುವಕರು ಅವರನ್ನು ರೆಡ್‌ ಹ್ಯಾಂಡ್‌ ಅಗಿ ಹಿಡಿದಿದ್ದರು. ಮಾತ್ರವಲ್ಲ ಅವರ ಮೆಲೆ ಹಲ್ಲೆ ನಡೆಸಿದರು. ಆಗ ಒಬ್ಬ ಯುವಕ ಪರಾರಿಯಾಗಿದ್ದ.

ಈ ನಡುವೆ, ಸ್ಥಳಕ್ಕೆ ಪೊಲೀಸರು ಆಗಮಿಸಿ ಅನುಚಿತವಾಗಿ ವರ್ತಿಸಿದ ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾದರು. ಆರೋಪಿಗಳನ್ನು ಕರೆದೊಯ್ಯುವ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಅವರು ಬೀಸಿದ ಕಲ್ಲಿಗೆ ಪೊಲೀಸ್ ಜೀಪಿನ ಗಾಜು ಪುಡಿಯಾಗಿತ್ತು.

ಪೊಲೀಸ್ ಜೀಪಿನ ಮೇಲೆ ಕಲ್ಲೆಸೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲ್ಲು ತೂರಾಟ ನಡೆಸಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ದೊಂಬಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Lovers Suicide: ಶರಾವತಿ ಸೇತುವೆಯಿಂದ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

Exit mobile version