Site icon Vistara News

Independence Day | ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ 1000 ಅಡಿ ಉದ್ದದ ತ್ರಿವರ್ಣ ಧ್ವಜ ಯಾತ್ರೆ!

Independence Day

ಶಿವಮೊಗ್ಗ: ಆಜಾದಿ ಕಾ ಅಮೃತ ಮಹೋತ್ಸವ (Independence Day) ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ 1000 ಅಡಿ ಉದ್ದದ ತ್ರಿವರ್ಣ ಧ್ವಜ ಯಾತ್ರೆಯನ್ನು ನೆರವೇರಿಸಲಾಗಿದೆ. ಇಷ್ಟು ಉದ್ದದ ತ್ರಿವರ್ಣ ಧ್ವಜ ಯಾತ್ರೆಗೆ ಶಾಲಾ ಮಕ್ಕಳು ಸಾಥ್‌ ನೀಡಿದ್ದಾರೆ.

ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಉದ್ಘಾಟಿಸಿ, ಜಾಥಾಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ | Independence Day | ಹೊಸಪೇಟೆಯಲ್ಲಿ 405 ಅಡಿ ಎತ್ತರದ ಬೃಹತ್ ಧ್ವಜ ಸ್ತಂಭದ ಮೇಲೆ ಹಾರಾಡಿದ ತಿರಂಗಾ!

ಸಿಮ್ಸ್ ಮೆಡಿಕಲ್ ಕಾಲೇಜಿನಿಂದ ಹೊರಟ ತಿರಂಗಾ ಯಾತ್ರೆ ನಗರದ ಎನ್‌ಇಎಸ್‌ ಮೈದಾನಕ್ಕೆ ಜಾಥಾ ತಲುಪಿತು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳು ಖುಷಿಯಿಂದ ಜಾಥಾದಲ್ಲಿ ಪಾಲ್ಗೊಂಡು ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಅಲ್ಲದೆ, ಭಾರತ್‌ ಮಾತಾಕಿ ಜೈ ಎಂಬ ಜಯಘೋಷವನ್ನು ಕೂಗಿದರು.

Exit mobile version