ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲೂ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ (Independence Day) ಕಳೆಕಟ್ಟಿದ್ದು, ಕರ್ನಾಟಕದ ಪ್ರಸಿದ್ಧ ಪ್ರವಾಸಿಗರ ತಾಣ ಗೋಲ್ಡನ್ ಟೆಂಪಲ್‌ನಲ್ಲಿ ಬೌದ್ಧ ಬಿಕ್ಕುಗಳಿಂದ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಸರತಿ ಸಾಲಿನಲ್ಲಿ ನಿಂತಿದ್ದ ಬೌದ್ಧ ಭಿಕ್ಷುಗಳು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶ ಭಕ್ತಿಯನ್ನು ಪ್ರದರ್ಶಿಸಿದರು. ಈ ವೇಳೆ ಪುಟಾಣಿ ಬೌದ್ಧ ಭಿಕ್ಷುಗಳು “ನಮ್ಮ ದೇಶ ನಮ್ಮ ಭಾರತ” ಎಂದು ಘೋಷಣೆ ಕೂಗಿ ರಾಷ್ಟ್ರಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಈ ಸುಂದರ ಘಳಿಗೆಯನ್ನು ಪ್ರವಾಸಿಗರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಬೈಲಕುಪ್ಪೆ ಆರಕ್ಷಕ ಠಾಣೆ ಆಟೋ ಚಾಲಕರ ಸಂಘದಿಂದ ವಿವಿಧ ಕಡೆಗಳಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ.
ಇದನ್ನೂ ಓದಿ | Independence Day | ಸಚಿವ ಸುಧಾಕರ್ ಭಾಷಣಕ್ಕೆ ರೈತರಿಂದ ವಿರೋಧ; ತೀವ್ರ ಪ್ರತಿಭಟನೆ