ಮಂಡ್ಯ: ಸ್ವಾತಂತ್ರ್ಯಕ್ಕೂ ಕಾಯಕಕ್ಕೂ ಸಂಬಂಧವಿದೆ ಎಂಬುದನ್ನು ಕಂಡುಕೊಂಡಿದ್ದಾರೆ ಮಂಡ್ಯದ ಈ ಮೀನುಗಾರರು. ತಾವು ಕೆಲಸ ಮಾಡುವ ಜಾಗದಲ್ಲೇ ಸಂಭ್ರಮಾಚರಣೆ ಮಾಡಬೇಕು ಎಂದು ನಿರ್ಧಿರಿಸಿದ ಅವರು ಅದಕ್ಕೆ ಆಯ್ಕೆ ಮಾಡಿದ್ದು ತಾವು ಮೀನು ಹಿಡಿಯುವ ಕೆರೆಯನ್ನೇ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷವಾಗಿ ಅವರು ಕೆರೆ ಮಧ್ಯೆ ಧ್ವಜಾರೋಹಣ ನಡೆಸಿ ದೇಶಾಭಿಮಾನ ಮೆರೆದರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲಿ ಅವರು ಧ್ವಜವನ್ನು ನೆಟ್ಟರು. ತೆಪ್ಪದಲ್ಲಿ ಕೆರೆ ಮಧ್ಯಕ್ಕೆ ತೆರಳಿ ಧ್ವಜಾರೋಹಣ ಮಾಡಿದರು. ಕೆರೆಯಲ್ಲೇ ರಾಷ್ಟ್ರ ಗೀತೆ ಹಾಡಿ ವಿಶೇಷ ನಮನ ಸಲ್ಲಿಸಿದರು.
ಗಂಗಾಪರಮೇಶ್ವರಿ ಮೀನುಗಾರರ ಸಂಘದ ವತಿಯಿಂದ ವಿಶೇಷ ಆಚರಣೆ ನಡೆಯಿತು. ಮೀನುಗಾರರ ಈ ವಿಶೇಷ ಆಚರಣೆಗೆ ತಹಶೀಲ್ದಾರ್ ರೂಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Independence day | ಸೊಂಡಿಲಲ್ಲಿ ತಿರಂಗಾ ಹಿಡಿದು ಪ್ರಾರ್ಥನೆ ಮಾಡಿದ ಲಕ್ಷ್ಮಿ, ಮೈಗೂ ತ್ರಿವರ್ಣ!