Site icon Vistara News

Independence Day: ನವದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ ವೀಕ್ಷಿಸಲು ರಾಜ್ಯದ 31 ಮಂದಿಗೆ ಆಹ್ವಾನ

PM Narendra Modi in red fort at New delhi

ಬೆಂಗಳೂರು: ನವದೆಹಲಿಯಲ್ಲಿ ಆಗಸ್ಟ್‌ 15ರಂದು ನಡೆಯುವ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸುವ ಅವಕಾಶ ಶ್ರೀಸಾಮಾನ್ಯರಿಗೆ ಲಭಿಸಿದೆ. ಈ ಬಾರಿ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದೇಶದ ವಿವಿಧ ಕ್ಷೇತ್ರಗಳ ಸುಮಾರು 1800 ಜನರು ವಿಶೇಷ ಆಹ್ವಾನಿತರಾಗಿದ್ದು, ಕರ್ನಾಟಕದ 31 ಮಂದಿಗೆ ಆಹ್ವಾನ ನೀಡಲಾಗಿದೆ.

ಕರ್ನಾಟಕದಿಂದ ಆಯ್ದ ಶಿಕ್ಷಕರು, ಮೀನುಗಾರರು, ಕುಶಲಕರ್ಮಿಗಳು ಮತ್ತು ಹಲವಾರು ಕಲ್ಯಾಣ ಯೋಜನೆಗಳ ಫಲಾನುಭವಿಗಳು ಸೇರಿ ಒಟ್ಟು 31 ವ್ಯಕ್ತಿಗಳು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ವಿಶೇಷ ಅವಕಾಶವನ್ನು ಪಡೆದಿದ್ದಾರೆ.

ಇದನ್ನೂ ಓದಿ | Independence Day 2023 : ಭಾರತದ ಹೆಮ್ಮೆಯಿದು ತ್ರಿವರ್ಣ; ನಮ್ಮ ಧ್ವಜದ ಕುರಿತ ಈ ಸಂಗತಿಗಳು ತಿಳಿದಿರಲಿ…

ವಿಶೇಷ ಅತಿಥಿಗಳಲ್ಲಿ ಕರ್ನಾಟಕದ ಆರು ಮಂದಿ ಶಿಕ್ಷಕರು, ನಾಲ್ವರು ಮೀನುಗಾರರು, ಮೂವರು ಕುಶಲಕರ್ಮಿಗಳು, ಮೂವರು ಜಲಜೀವನ ಮಿಷನ್‌ ಫಲಾನುಭವಿಗಳು, ಅಮೃತ ಸರೋವರ ಮತ್ತು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯ ತಲಾ ಇಬ್ಬರು ಫಲಾನುಭವಿಗಳು, 13 ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಸೇರಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣವನ್ನು ಕೇಳಲು ಆಹ್ವಾನಿತರು ಮತ್ತು ಯೋಜನೆಗಳ ಫಲಾನುಭವಿಗಳನ್ನು ಅವರ ಕುಟುಂಬದೊಂದಿಗೆ ಆಹ್ವಾನಿಸಲಾಗಿದೆ. ದೇಶದಾದ್ಯಂತ, ಎಲ್ಲಾ ವರ್ಗದ ಜನರನ್ನು ಆಹ್ವಾನಿಸುವ ಮತ್ತು ಆಚರಣೆಯ ಭಾಗವಾಗಿಸುವ ತನ್ನ ‘ಜನ ಭಾಗೀದಾರಿ’ ದೃಷ್ಟಿಕೋನಕ್ಕೆ ಅನುಗುಣವಾಗಿ ಸರ್ಕಾರವು ಈ ಉಪಕ್ರಮವನ್ನು ತೆಗೆದುಕೊಂಡಿದೆ.

15 ಆಗಸ್ಟ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಾಗ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 1,800 ವಿಶೇಷ ಆಹ್ವಾನಿತರು ಸ್ವಾತಂತ್ರ್ಯೋತ್ಸವವನ್ನು ವೀಕ್ಷಿಸಲಿದ್ದಾರೆ. ‌

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ನಾನು ಆಜಾದ್‌, ಇನ್ನೆಂದೂ ನಿಮ್ಮ ಕೈಗೆ ಸಿಗಲಾರೆ; ಆ ಕ್ರಾಂತಿಕಾರಿ ಸಾವಿನಲ್ಲೂ ಮಾತು ಉಳಿಸಿಕೊಂಡಿದ್ದ!

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷ 75 ವರ್ಷಗಳು ಪೂರ್ಣಗೊಂಡಿದ್ದು, ವಿವಿಧ ಗ್ರಾಪಂ ಅಧ್ಯಕ್ಷರು, ಶಿಕ್ಷಕರು, ದಾದಿಯರು, ರೈತರು, ಮೀನುಗಾರರು, ನವದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಶ್ರಮ ಯೋಗಿಗಳು, ಖಾದಿ ವಲಯದ ಕಾರ್ಯಕರ್ತರು, ರಾಷ್ಟ್ರ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರು, ಗಡಿ ರಸ್ತೆಗಳ ಸಂಸ್ಥೆಯ ಕಾರ್ಮಿಕರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಅಮೃತಸರೋವರ ಯೋಜನೆಗಳು ಮತ್ತು ಹರ್‌ ಘರ್‌ ಜಲ್ ಯೋಜನೆಗಳಿಗೆ ಸಹಾಯ ಮಾಡಿದ ಮತ್ತು ಕೆಲಸ ಮಾಡಿದ ಕಾರ್ಮಿಕರನ್ನು ರಾಷ್ಟ್ರ ರಾಜಧಾನಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಅವರ ಕುಟುಂಬ ಸದಸ್ಯರೊಂದಿಗೆ ಆಹ್ವಾನಿಸಲಾಗಿದೆ.

ಆಹ್ವಾನ ಪಡೆದವರ ಪ್ರತಿಕ್ರಿಯೆ

ಜಲಜೀವನ ಮಿಷನ್ ಯೋಜನೆಯಡಿ ಜಲಮಹಿಳೆಯಾಗಿ ಕೆಲಸ ಮಾಡುತ್ತಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮ ಪಂಚಾಯಿತಿಯ ಪುಷ್ಪಾ ಹೊನ್ನತ್ತಿ.

ಹಾವೇರಿ ಜಿಲ್ಲೆ ಗುತ್ತಲ ಗ್ರಾಮದ ಸಣ್ಣ ರೈತ ನೀಲಪ್ಪ ಶಂಭಪ್ಪ ನೀಲಣ್ಣನವರ್.

ಚಾಮರಾಜ ನಗರ ಜಿಲ್ಲೆ ಯಳಂದೂರು ತಾಲೂಕು ಅಗರ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಅಡಿಯಲ್ಲಿ ಪುಸ್ತಕ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿರುವ ನಳಿನಾ ಕುಮಾರಿ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಗ್ರಾಮದ ರೈತ ಎನ್.ಎಚ್. ವಿರೂಪಾಕ್ಷಮೂರ್ತಿ.

ಕಲಬುರ್ಗಿ ಜಿಲ್ಲೆಯ ಬೆಳಗುಂಪಿಯ ರೈತ ಆನಂದ ನಾಗೇಂದ್ರಪ್ಪ.

ಅಖಿಲ ಭಾರತ ಮೀನುಗಾರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿರುವ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಕರುಣಾಕರ್ ಎಸ್.ಸಾಲಿಯಾನ್ ಮತ್ತು ಅವರ ಪತ್ನಿ ತುಂಗಾ ಕರುಣಾಕರ್.

ಮೀನುಗಾರರು ಹಾಗೂ ಉಡುಪಿ ಜಿಲ್ಲಾ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಾಗೂ ಅಖಿಲ ಭಾರತ ಮೀನುಗಾರರ ಸಂಘಟನೆಯ ಕಾರ್ಯದರ್ಶಿ ದಯಾನಂದ ಕೆ.ಸುವರ್ಣ.

ಚಿಕ್ಕಮಗಳೂರು ತಾಲ್ಲೂಕು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಪಿ.ವಿ.ಲೋಕೇಶ್.

ವಿಜಯನಗರ ಜಿಲ್ಲೆ ಕೂಡ್ಲಿಗಿಯ ರೈತ ಉತ್ಪಾದಕರ ಕಂಪನಿಯ ಸಿಇಒ ಜಿ.ಎಸ್. ಗಿರೀಶ್.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಸೂರು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಗಿರೀಶ್.

ವಿಜಯಪುರ ಜಿಲ್ಲೆಯ ಮಲ್ಲನಗೌಡ ಪಾಟೀಲ.

ಅಮೃತ ಸರೋವರದ ಫಲಾನುಭವಿಯಾದ ಕೋಲಾರ ಜಿಲ್ಲೆ ಪೆದ್ದಪಲ್ಲಿ ಗ್ರಾಮದ ಮಲ್ಲರವಳ್ಳಿ

Exit mobile version