Site icon Vistara News

Independence Day | ಉಡುಪಿಯ ವೆಲ್ಡರ್ ಕೈಯಲ್ಲಿ ಮೂಡಿದ ಯುದ್ಧ ಟ್ಯಾಂಕ್!

ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುವ ಶಂಕರ ಪೂಜಾರಿ

ಉಡುಪಿ: ಜಿಲ್ಲೆಯಾದ್ಯಂತ ಸ್ವಾತಂತ್ರೋತ್ಸವ ಸಂಭ್ರಮ ಕಳೆಕಟ್ಟಿದ್ದು, 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು (Independence Day) ಬ್ರಹ್ಮಾವರ ಮೂಲಕ ವೆಲ್ಡರ್ ಒಬ್ಬರು ವಿನೂತನವಾಗಿ ಆಚರಿಸಿದ್ದಾರೆ.
ಬ್ರಹ್ಮಾವರ ತಾಲೂಕು ಉಪ್ಪಿನಕೋಟೆಯಲ್ಲಿ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುವ ಶಂಕರ ಪೂಜಾರಿ ಸ್ವಾತಂತ್ರ್ಯದ ನೆನಪಿನ ಯುದ್ಧ ಟ್ಯಾಂಕರ್‌ ತಯಾರಿಸಿ ಗಮನ ಸೆಳೆದಿದ್ದಾರೆ.

ಉಪ್ಪಿನಕೋಟೆಯ ಎಸ್‌.ಡಿ.ಪಿ ಎಂಜಿನಿಯರಿಂಗ್‌ ವರ್ಕ್ಸ್‌ನಲ್ಲಿ ಕಳೆದ 25 ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ಮಾಡುತ್ತಿರುವ ಹೊನ್ನಾಳದ ಶಂಕರ್ ದ್ವಿಚಕ್ರ ವಾಹನದ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಸುಮಾರು 7 ಕೆ.ಜಿ. ತೂಕದ ಫಿರಂಗಿಯ ಮಾಡೆಲ್ ತಯಾರಿಸಿದ್ದಾರೆ.

ಬಹುತೇಕ ವೆಲ್ಡಿಂಗ್ ಶಾಪ್‌ನಲ್ಲೇ ದೊರಕುವ ವಸ್ತುಗಳನ್ನು ಉಪಯೋಗಿಸಿಕೊಂಡು 2 ದಿನದಲ್ಲಿ ಫಿರಂಗಿ ಮಾಡೆಲ್ ಅನ್ನು ತಯಾರಿಸಿದ್ದಾರೆ. ಸ್ಥಳೀಯರಾದ ಉದಯ ಕುಮಾರ್ ಇದಕ್ಕೆ ಬಣ್ಣವನ್ನು ನೀಡಿ ಮೆರುಗನ್ನು ನೀಡಿದ್ದಾರೆ.

ಇದನ್ನೂ ಓದಿ | Power lifting ಸ್ಪರ್ಧೆಯಲ್ಲಿ ರಾಷ್ಟ್ರೀಯ ಪದಕಗಳನ್ನು ಬಾಚಿದ ಕುಂದಾಪುರದ ಪ್ರತಿಭೆ

Exit mobile version