Site icon Vistara News

India Energy week 2023 : ಮೋದಿ ಕಾರ್ಯಕ್ರಮ ವೇದಿಕೆಯಲ್ಲಿ ಒಂದೇ ಒಂದು ಕನ್ನಡದ ಪದವೂ ಇಲ್ಲ!

Energy English

#image_title

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿರುವ ರಾಷ್ಟ್ರೀಯ ಇಂಧನ ಸಪ್ತಾಹ (India Energy week 2023) ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ರಾಜ್ಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ಪ್ರತಿ ಬಾರಿ ಇಂಥ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆದಾಗ ಕನ್ನಡವನ್ನು ಅವಗಣಿಸುವುದು ನಡೆಯುತ್ತಿದೆ. ಈ ಹಿಂದೆಯೂ ಹಲವು ಬಾರಿ ಈ ಬಗ್ಗೆ ಗಮನ ಸೆಳೆದಾಗ ಮುಂದಿನ ಬಾರಿ ಇದನ್ನು ಸರಿಪಡಿಸಲಾಗುವುದು ಎಂಬ ಭರವಸೆಯನ್ನು ನೀಡಲಾಗುತ್ತಿತ್ತು. ಆದರೆ, ಪ್ರತಿ ಬಾರಿಯೂ ಕಡೆಗಣನೆ ಮುಂದುವರಿಯುತ್ತಲೇ ಇದೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಡೆದಿದೆ. ಬೆಂಗಳೂರಿನಲ್ಲೇ ಕಾರ್ಯಕ್ರಮ ನಡೆಯುತ್ತಿದ್ದರೂ ವೇದಿಕೆಯಲ್ಲಿ ಕನ್ನಡದ ಒಂದೇ ಒಂದು ಪದವೂ ಇಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗುತ್ತೆ ಎಂದು ಸರ್ಕಾರ ಹೇಳಿತ್ತು. ಆದರೆ, ಅದೇ ಚಾಳಿ ಮುಂದುವರಿದಿದೆ.

ವೇದಿಕೆಯಲ್ಲಿ ಕೇವಲ ಇಂಗ್ಲಿಷ್‌ ಭಾಷೆಯದೇ ಅಬ್ಬರ ಕಾಣಿಸುತ್ತಿದೆ. ಮಾತನಾಡಿದ ನಾಯಕರು ಕೂಡಾ ಇಂಗ್ಲಿಷ್‌ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ. ಇದು ಅಂತಾರಾಷ್ಟ್ರೀಯ ಸಮಾವೇಶವಾಗಿರುವುದರಿಂದ ಅದೇನೋ ಸರಿ ಎಂದು ಒಪ್ಪಿಕೊಳ್ಳಬಹುದು. ಆದರೆ, ಕನ್ನಡದ ನೆಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಾಕೆ ಭಾಷೆಯ ಅವಗಣನೆ ಎನ್ನುವುದು ಕನ್ನಡ ಪ್ರೇಮಿಗಳ ಪ್ರಶ್ನೆ.

ಒಂದು ವೇಳೆ ಇಂಥ ಕಾರ್ಯಕ್ರಮಗಳು ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿ ವೇದಿಕೆಯಲ್ಲಿ ತಮಿಳು ಭಾಷೆ ಇದ್ದೇ ಇರುತ್ತಿದೆ. ಇದೇ ಕೇಂದ್ರ ಸರಕಾರವೇ ತಮಿಳು ಭಾಷೆಯನ್ನು ಬಳಸುತ್ತಿತ್ತು. ಹಿಂದೆ ಹಲವಾರು ಬಾರಿ ಈ ರೀತಿ ಆಗಿದೆ. ಆದರೆ, ಕನ್ನಡದ ವಿಚಾರಕ್ಕೆ ಬಂದಾಗ ಮಾತ್ರ ಅವಗಣನೆ ಎನ್ನುವುದು ಕನ್ನಡಿಗರ ಬೇಸರ.

ಇದನ್ನೂ ಓದಿ : Narendra Modi: ಮೋದಿ ಉದ್ಘಾಟಿಸಲಿರುವ ಎಚ್‌ಎಎಲ್‌ ಘಟಕದ ವಿಶೇಷತೆ ಏನು?

Exit mobile version