Site icon Vistara News

Tiger Census: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ, ರಾಜ್ಯದಲ್ಲಿರುವುದು ಇಷ್ಟು ಟೈಗರ್‌

Tigers In Karnataka

India houses 75% of the world’s tigers, Karnataka Bags Second Spot Again

ಬೆಂಗಳೂರು: ದೇಶದಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮವಾಗಿ ಕಳೆದ ನಾಲ್ಕು ವರ್ಷದಲ್ಲಿ ಹುಲಿಗಳ ಸಂಖ್ಯೆಯು (Tiger Census) ಗಣನೀಯವಾಗಿ ಏರಿಕೆಯಾಗಿದೆ. ದೇಶದಲ್ಲಿ 2018ರಲ್ಲಿ 2,197 ಇದ್ದ ಹುಲಿಗಳ ಸಂಖ್ಯೆಯು 2022ರ ವೇಳೆಗೆ 3,682ಕ್ಕೆ ಏರಿಕೆಯಾಗಿದೆ. ಅದರಂತೆ, 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎನಿಸಿದರೆ, ಕರ್ನಾಟಕವು 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭಾರತದಲ್ಲಿರುವ ಹುಲಿಗಳ ಸಂಖ್ಯೆ ಕುರಿತು ವರದಿ ಬಿಡುಗಡೆ ಮಾಡಿದೆ. 2018ರಿಂದ 2022ರ ಅವಧಿಯಲ್ಲಿ ಹುಲಿಗಳ ಸಂಖ್ಯೆಯು ಶೇ.ಗಣನೀಯವಾಗಿ ಏರಿಕೆಯಾಗಿದೆ. ದೇಶದ ನಾಲ್ಕು ರಾಜ್ಯಗಳಲ್ಲೇ ಅಂದರೆ, ಮಧ್ಯಪ್ರದೇಶ (785), ಕರ್ನಾಟಕ (563), ಉತ್ತರಾಖಂಡ (560) ಹಾಗೂ ಮಹಾರಾಷ್ಟ್ರ (444)ದಲ್ಲಿಯೇ ದೇಶದ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಶೇ.50ರಷ್ಟು ಹುಲಿಗಳಿವೆ ಎಂದು ವರದಿ ತಿಳಿಸಿದೆ.

ಜಗತ್ತಿನ ಹುಲಿಗಳಲ್ಲಿ ಭಾರತದ ಪಾಲು ಶೇ.75ರಷ್ಟು

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಅಲ್ಲದೆ, ಜಗತ್ತಿನ ಹುಲಿಗಳಲ್ಲಿ ಭಾರತದಲ್ಲೇ ಶೇ.75ರಷ್ಟು ಹುಲಿಗಳಿವೆ. ಭಾರತದ ನಂತರದ ಸ್ಥಾನದಲ್ಲಿ ರಷ್ಯಾ (480), ಇಂಡೋನೇಷ್ಯಾ (372), ನೇಪಾಳ (355), ಥಾಯ್ಲೆಂಡ್‌ (149), ಮಲೇಷ್ಯಾ (120) ಹಾಗೂ ಬಾಂಗ್ಲಾದೇಶ (106) ಇವೆ. ಅಂದಹಾಗೆ, ಜಗತ್ತಿನಲ್ಲಿ ಒಟ್ಟು 5,575 ಹುಲಿಗಳಿವೆ.

ಇದನ್ನೂ ಓದಿ: International Tiger Day: ಭಾರತದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಿವು

ಭಾರತದಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶದಲ್ಲಿ 2006ರಲ್ಲಿ 1,411 ಹುಲಿಗಳು ಇದ್ದವು. ಇವುಗಳ ಸಂಖ್ಯೆಯು 2018ರ ವೇಳೆಗೆ 2,197ಕ್ಕೆ ಏರಿಕೆಯಾಗಿತ್ತು. ಕರ್ನಾಟಕವು 2018ರಲ್ಲಿಯೂ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿಯೂ ಅದೇ ಸ್ಥಾನದಲ್ಲಿ ಮುಂದುವರಿದಿದೆ. ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶದಲ್ಲಿ 150 ಹಾಗೂ ನಾಗರಹೊಳೆ ಪ್ರದೇಶದಲ್ಲಿ 141 ಹುಲಿಗಳಿವೆ.

Exit mobile version